Home News ಮಲಗಿದ್ದಲ್ಲೇ ಕೊನೆಯುಸಿರೆಳೆದ ಕ್ರೀಡಾಪಟು

ಮಲಗಿದ್ದಲ್ಲೇ ಕೊನೆಯುಸಿರೆಳೆದ ಕ್ರೀಡಾಪಟು

ಮಂಗಳೂರು: ಹಿರಿಯ ಕ್ರೀಡಾಪಟು ಬೃಂದಾ ಪ್ರಭು ಅವರು ತೀರ್ಥಯಾತ್ರೆಗೆಂದು ತೆರಳಿದ್ದ ವೇಳೆ ಮಲಗಿದ್ದಲ್ಲೇ ಕೊನೆಯುಸಿರೆಳೆದಿದ್ದಾರೆ.
೬೮ ವರ್ಷದ ಬೃಂದಾ ಅವರು ಕುಂಭಮೇಳಕ್ಕೆ ತೆರಳಿ ಪುಣ್ಯಸ್ನಾನದ ಬಳಿಕ ಭಾನುವಾರ ಸಂಜೆ ಕಾಶಿ ವಿಶ್ವನಾಥನ ದರ್ಶನ ಪಡೆದು ಕೊಠಡಿಯಲ್ಲಿ ಮಲಗಿದ್ದವರು ಕೊನೆಯುಸಿರೆಳೆದಿದ್ದಾರೆ.
ಮಂಗಳೂರು ಮೂಲದ ಬೃಂದಾ ಅವರು ಫುಟ್‌ಬಾಲ್ ಆಟಗಾರ್ತಿಯಾಗಿದ್ದು ಭಾರತದ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದರು. ಬೆಂಗಳೂರು ವಿಶ್ವವಿದ್ಯಾಲಯದ ವಾಲಿಬಾಲ್ ತಂಡವನ್ನು ಪ್ರತಿನಿಧಿಸಿದ್ದರು. ಅವರ ಪತಿ ಉದಯ್ ಪ್ರಭು ಭಾರತದ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟು, ಧ್ಯಾನ್‌ಚಂದ್ ಪ್ರಶಸ್ತಿ ವಿಜೇತರು. ದಂಪತಿಯ ಪುತ್ರಿ ಅಮೆರಿಕದಲ್ಲಿ ನೆಲೆಸಿದ್ದಾರೆ.
ಪತಿ ಉದಯ್ ಪ್ರಭು ಅವರು ವಾರಾಣಸಿಗೆ ತೆರಳಿದ್ದು ಇಂದು ಅಲ್ಲೇ ಅಂತ್ಯಕ್ರಿಯೆ ನಡೆಸಲಾಗುತ್ತಿದೆ.

Exit mobile version