Home ತಾಜಾ ಸುದ್ದಿ ಮನೆಯಲ್ಲಿ ಕುಳಿತುಕೊಳ್ಳಬೇಡಿ, ನಿಮ್ಮ ನಾಯಕನನ್ನು ನೀವೇ ಆಯ್ಕೆ ಮಾಡಿ

ಮನೆಯಲ್ಲಿ ಕುಳಿತುಕೊಳ್ಳಬೇಡಿ, ನಿಮ್ಮ ನಾಯಕನನ್ನು ನೀವೇ ಆಯ್ಕೆ ಮಾಡಿ

0

ಬೆಂಗಳೂರು: ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಅವರ ಪತ್ನಿ ಸುಧಾಮೂರ್ತಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಭಾರತೀಯ ವಿದ್ಯಾ ಸಂಸ್ಥೆ ಮತಗಟ್ಟೆಯಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.
ಬಳಿಕ ಮಾತನಾಡಿದ ಅವರು, “ನಾನು ಎಲ್ಲರಿಗೂ ಹೇಳಲು ಬಯಸುವುದೇನೆಂದರೆ ಮತದಾರರು ಮನೆಯಲ್ಲಿ ಕುಳಿತುಕೊಳ್ಳಬೇಡಿ, ಹೊರಗೆ ಬಂದು ಮತ ಚಲಾಯಿಸಿ. ನಿಮ್ಮ ನಾಯಕನನ್ನು ನೀವೇ ಆಯ್ಕೆ ಮಾಡಿ. ಹೆಚ್ಚಿನ ಸಂಖ್ಯೆಯಲ್ಲಿ ಬಂದು ಯುವಕ, ಯುವತಿಯರು ಮತದಾನ ಮಾಡಬೇಕು” ಎಂದರು.

Exit mobile version