Home ನಮ್ಮ ಜಿಲ್ಲೆ ತುಮಕೂರು ಮಧು ಬಂಗಾರಪ್ಪ ಕಾರು ಅಪಘಾತ: ಸಚಿವರು ಅಪಾಯದಿಂದ ಪಾರು

ಮಧು ಬಂಗಾರಪ್ಪ ಕಾರು ಅಪಘಾತ: ಸಚಿವರು ಅಪಾಯದಿಂದ ಪಾರು

0

ತುಮಕೂರು: ಸಚಿವ ಮಧು ಬಂಗಾರಪ್ಪ ಅವರು ತೆರಳುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಘಟನೆ ತುಮಕೂರು ಹೊರವಲಯದ ಕ್ಯಾತ್ಸಂದ್ರ ಬಳಿ ನಿನ್ನೆ ತಡರಾತ್ರಿ ನಡೆದಿದೆ.
ಸಚಿವರು ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕ್ಯಾತ್ಸಂದ್ರದ ಬಳಿ ಕಾರು ಹೋಗುತ್ತಿದ್ದಾಗ ಎದುರಿನಿಂದ ಬಂದ ಲಾರಿ ಉಜ್ಜಿಕೊಂಡು ಹೋಗಿದೆ. ಇದರಿಂದಾಗಿ ಕಾರಿನ ಮುಂಭಾಗ ಕಿತ್ತು ಹೋಗಿದೆ. ಸ್ವಲ್ಪದರಲ್ಲೇ ದುರಂತ ತಪ್ಪಿದೆ. ಬಳಿಕ ಸಚಿವರು ಬೇರೆ ಕಾರಿನಲ್ಲಿ ಬೆಂಗಳೂರಿಗೆ ತೆರಳಿದರು. ಈ ಸಂಬಂಧ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version