Home ಅಪರಾಧ ಮದುವೆ ನಿಶ್ಚಯವಾಗಿದ್ದ ಯುವತಿ ಆತ್ಮಹತ್ಯೆ ಸುದ್ದಿ ಕೇಳಿ ಯುವಕ ನೇಣಿಗೆ ಶರಣು

ಮದುವೆ ನಿಶ್ಚಯವಾಗಿದ್ದ ಯುವತಿ ಆತ್ಮಹತ್ಯೆ ಸುದ್ದಿ ಕೇಳಿ ಯುವಕ ನೇಣಿಗೆ ಶರಣು

0

ಬೆಳಗಾವಿ: ನಿಶ್ಚಿತ ವಧು ಅನಾರೋಗ್ಯದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ತಿಳಿದು ಯುವಕನೂ ನೇಣಿಗೆ ಕೊರಳೊಡ್ಡಿ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಉತ್ತರ ಪ್ರದೇಶದ ಫತೇಪುರ ಮೂಲದ ನಿವಾಸಿ ನಗರದಲ್ಲಿ ಬಟ್ಟೆ ವ್ಯಾಪಾರಿಯಾಗಿದ್ದ ಆವೇಶ ಜುಬೇರ ಪಠಾಣ (೨೭) ಎಂಬುವನೆ ಮೃತ ಯುವಕ.
ಫತೇಪುರದ ಯುವತಿಯೊಂದಿಗೆ ಇತ್ತೀಚೆಗೆ ಆವೇಶನ ಮದುವೆ ನಿಶ್ಚಯವಾಗಿತ್ತು. ಇಬ್ಬರೂ ಪರಸ್ಪರ ಇಷ್ಟಪಟ್ಟು ಮದುವೆಗೆ ಒಪ್ಪಿದ್ದು ಮೊಬೈಲ್ ನಲ್ಲಿ ಮಾತು ಚಾಟಿಂಗ್ ನಡೆಸಿ ಆತ್ಮೀಯರಾಗಿದ್ದರು.
ಆದರೆ ಕಳೆದ ದಿನ ಅನಾರೋಗ್ಯ ದಿಂದ ವೈದ್ಯರ ಬಳಿ ತಪಾಸಣೆ ನಡೆಸಿದಾಗ ಯುವತಿಗೆ ಕಾನ್ಸರ್ ಇರುವುದು ಪತ್ತೆಯಾಗಿದೆ. ತನ್ನನ್ನು ಮದುವೆಯಾಗಿ ಆವೇಶ ತೊಂದರೆ ಪಡಬಾರದು ಎಂದು ಯುವತಿ ಫತೆಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡು ಜೀವನ‌ ಮುಗಿಸಿದ್ದಾಳೆ. ಆದರೆ ಯುವತಿಯ ಸಾವಿನ ಸುದ್ದಿ ತಿಳಿದು ಆಘಾತಕ್ಕೆ ಒಳಗಾದ ಯುವಕ ಖಡೇಬಜಾರಿನ ತನ್ನ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾನೆ.
ಖಡೇಬಜಾರ್ ಪೊಲೀಸರು ಸ್ಥಳಕ್ಕೆ ಧಾವಿಸಿ ಮಹಜರು ನಡೆಸಿದ್ದು, ಜಿಲ್ಲಾ ಆಸ್ಪತ್ರೆ ಯ ಶವಾಗಾರಕ್ಕೆ ಸಾಗಿಸಲಾಯಿತು.

Exit mobile version