Home ಅಪರಾಧ ಮಗನನ್ನೇ ಕೊಲೆಗೈದ ತಂದೆ

ಮಗನನ್ನೇ ಕೊಲೆಗೈದ ತಂದೆ

0

ಚಿಕ್ಕಮಗಳೂರು: ತಂದೆಯೇ ತನ್ನ ಮಗನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದೆ. ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂದಿರಾ ನಗರದಲ್ಲಿ ಘಟನೆ ನಡೆದಿದೆ.
ತಂದೆ ಗೋಪಾಲಗೌಡ ತನ್ನ ಮಗ ಪ್ರಸನ್ನ(೩೮) ಎಂಬುವರನ್ನು ಮಂಗಳವಾರ ರಾತ್ರಿ ಮಾಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಇಂದಿರಾ ನಗರ ಮನೆಯಲ್ಲಿ ಒಟ್ಟಾಗಿ ವಾಸಿಸುತ್ತಿದ್ದ ತಂದೆ ಹಾಗೂ ಮಗ ನಿನ್ನೆ ರಾತ್ರಿ ಪರಸ್ಪರ ಜಗಳ ಮಾಡಿಕೊಂಡಿದ್ದು ಜಗಳ ವಿಕೋಪಕ್ಕೆ ಹೋಗಿ ಮನೆಯಲ್ಲಿದ್ದ ಹಾರೆಯಿಂದ ಮಗನ ತಲೆಗೆ ಹೊಡೆದಿದ್ದು ತೀವ್ರ ಗಾಯಗೊಂಡ ಮಗ ಪ್ರಸನ್ನ ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಕೊಲೆ ಆರೋಪಿ ಗೋಪಾಲಗೌಡನನ್ನು ಬಂಧಿಸಿದ್ದಾರೆ. ಮೃತ ಪ್ರಸನ್ನಗೆ ವಿವಾಹವಾಗಿದ್ದು ಪತ್ನಿ ತನ್ನ ಮಕ್ಕಳೊಂದಿಗೆ ಬೇರೆಯಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ.

Exit mobile version