Home ತಾಜಾ ಸುದ್ದಿ ಭ್ರಷ್ಟಾಚಾರದ ಜನಕ ಕಾಂಗ್ರೆಸ್ ಪಕ್ಷ

ಭ್ರಷ್ಟಾಚಾರದ ಜನಕ ಕಾಂಗ್ರೆಸ್ ಪಕ್ಷ

0

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ ಯಾವಾಗಲೂ ಭ್ರಷ್ಟಾಚಾರದಲ್ಲಿದೆ. ಈ ದೇಶದಲ್ಲಿ ಭ್ರಷ್ಟಾಚಾರದ ಜನಕ ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಹೈ ಕಮಾಂಡ್ ಮುಡಾ ಹಗರಣದಲ್ಲಿ ತೊಡಗಿರುವ ಸಿದ್ದರಾಮಯ್ಯ ಜೊತೆ ಇರುವುದು ಆಶ್ಚರ್ಯ ಏನಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮೊದಲಿನಿಂದಲೂ ಭ್ರಷ್ಟರಿಗೆ ರಕ್ಷಣೆ ನೀಡುತ್ತ ಬಂದಿದೆ. ನೆಹರೂ ಕಾಲ, ಇಂದಿರಾಗಾಂಧಿ ಕಾಲ, ರಾಜೀವ್ ಗಾಂಧಿ ಕಾಲ, ಸೋನಿಯಾ ಅರ್ಥಾತ್ ಮನಮೋಹನ ಸಿಂಗ್ ಕಾಲ, ರಾಹುಲ್ ಗಾಂಧಿ ಅವರ ಕಾಲದಲ್ಲಿ ಕಾಂಗ್ರೆಸ್ ಭ್ರಷ್ಟಾಚಾರದ ಪರಾಕಾಷ್ಠೆ ತಲುಪಿದ್ದಾರೆ. ದೇಶದಲ್ಲಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ ಬರುವ ಮುನ್ನ ಈ ಮೇಲೆ ಹೇಳಿದ ಎಲ್ಲರಿಗೂ ಖ್ಯಾತಿ ಇತ್ತು. ಜಗತ್ತಿನಲ್ಲಿಯೇ ಭ್ರಷ್ಟಾಚಾರಕ್ಕೆ ಹೆಸರುವಾಸಿ ಕಾಂಗ್ರೆಸ್ ಪಕ್ಷ ಎಂದರು.
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದರೆ ಅಧಿಕಾರಿಗಳು ಹೇಗೆ ತನಿಖೆ ಮಾಡುತ್ತಾರೆ. ತನಿಖೆ ಮುಗಿಯುವವರೆಗೂ ರಾಜೀನಾಮೆ ನೀಡಿ, ತನಿಖೆ ಮುಗಿದು ನಿರಪರಾಧಿ ಎಂದು ಸಾಬೀತಾದ ಬಳಿಕ ಮತ್ತೆ ಮುಖ್ಯಮಂತ್ರಿಯಾಗಿ. ಭ್ರಷ್ಟಾಚಾರಕ್ಕೆ ಯಾವದೇ ಜಾತಿ ಇಲ್ಲ. ಭ್ರಷ್ಟಾಚಾರ ದೇಶಕ್ಕೆ ಅಂಟಿದ ರೋಗ. ಇದಕ್ಕೆ ಜಾತಿಯ ಲೇಪನ ಮಾಡಬಾರದು. ರಾಜ್ಯಪಾಲರು ಕೂಡಾ ಅತ್ಯಂತ ಹಿಂದುಳಿದ ಸಮಾಜವದರು ಎಂದು ಹೇಳಿದರು.

Exit mobile version