ಬೆಳ್ತಂಗಡಿ: ನೆರಿಯ ಸುತ್ತಮುತ್ತ ಭಾರೀ ಮಳೆಯಾಗಿದ್ದು ನದಿಯ ಅಪಾಯದ ಮಟ್ಟದಲ್ಲಿ ನೀರು ಹರಿಯುತ್ತಿದೆ. ನೆರಿಯ, ಪುಲ್ಲಾಜೆ ಸೇತುವೆಗಳು ಮುಳುಗಡೆಯಾಗಿದ್ದು ಸಂಚಾರಕ್ಕೆ ತೊಂದರೆಯುಂಟಾಗಿದೆ.
ನಿನ್ನೆ ರಾತ್ರಿ ಕೂಡ ಭಾರೀ ಮಳೆಯಾದ ಕಾರಣ ನದಿಗಳಲ್ಲಿ ಭಾರೀ ನೀರು ಬಂದು ಸೇತುವೆ ಮುಳುಗಡೆಯಾಗಿತ್ತು. ಇಂದು ಸಂಜೆ ವೇಳೆ ನೆರಿಯ ಸೇರಿದಂತೆ ಸುತ್ತಮುತ್ತ ಭಾರೀ ಮಳೆ ಸುರಿದ ಪರಿಣಾಮ ಸೇತುವೆಯ ಮೇಲೆ ನದಿಗಳ ನೀರು ಹರಿಯುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆಯುಂಟಾಗಿದೆ. ನಿನ್ನೆ ಅಪಾಯದ ಮಟ್ಟದಲ್ಲಿ ನದಿಗಳು ತುಂಬಿ ಹರಿದ ಕಾರಣ ಸ್ಥಳೀಯ ಜನರು ಭಯಭೀತರಾಗಿದ್ದು ಇವತ್ತೂ ಕೂಡ ಭಾರೀ ನೀರು ನದಿಯಲ್ಲಿ ಬಂದಿರುವುದರಿಂದ ಜನರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.