Home News ಭಾರತದ ಜನರ ಭಾವನೆ ಪ್ರತಿನಿಧಿಸಿ ಸಂಸದ ಶಶಿ ತರೂರ್ ಹೋಗುತ್ತಿದ್ದಾರೆ

ಭಾರತದ ಜನರ ಭಾವನೆ ಪ್ರತಿನಿಧಿಸಿ ಸಂಸದ ಶಶಿ ತರೂರ್ ಹೋಗುತ್ತಿದ್ದಾರೆ

ಚಿಕ್ಕಮಗಳೂರು: ಸಂಸದ ಶಶಿ ತರೂರ್ ಭಾರತ ಹಾಗೂ 140 ಕೋಟಿ ಜನರನ್ನು ಪ್ರತಿನಿಧಿಸಿರುವುದು. ಬಿಜೆಪಿ ಅಥವಾ ಕಾಂಗ್ರೆಸ್ ಪ್ರತಿನಿಧಿಸಲು ಹೋಗಿರುವುದು ಅಲ್ಲ, ಭಾರತದ ಜನರ ಭಾವನೆಯನ್ನು ಪ್ರತಿನಿಧಿಸಿ ಹೋಗುತ್ತಿದ್ದಾರೆ ಎಂದಾಗ ಅದನ್ನ ಗೌರವಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ತಿಳಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಷ್ಟ್ರೀಯ ಪಕ್ಷ ಹಾಗೂ ರಾಷ್ಟ್ರೀಯ ಪ್ರಜ್ಞೆ ಇರುವ ಪಕ್ಷಗಳ ಕರ್ತವ್ಯ ಕಾಂಗ್ರೆಸ್, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅಂತ ಹೆಸರನ್ನು ಇಟ್ಟುಕೊಂಡಿವೆ. ನ್ಯಾಷನಲ್ ಅನ್ನೋದನ್ನು ಕಾಂಗ್ರೆಸ್‌ನವರು ಮರೆಯಬಾರದು ಎಂದು ಸಲಹೆ ನೀಡಿದರು.
ಪಾಕಿಸ್ತಾನದ ಉಗ್ರರ ಮುಖವಾಡ ಬಯಲು ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನಿಯೋಗಕ್ಕೆ ಕಾಂಗ್ರೆಸ್ ಸಂಸದ ಶಶಿ ತರೂರ್‌ರನ್ನು ಆಯ್ಕೆ ಮಾಡಿದ ವಿಷಯವು ಇದೀಗ ಕೇಂದ್ರದಲ್ಲಿನ ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಗಿರುವ ಕುರಿತು ಪ್ರತಿಕ್ರಿಯೆ ನೀಡಿದರು.
ಕೌರವರು ಹಾಗೂ ಪಾಂಡವರ ಕಥೆಯ ಮೂಲಕ ಕಾಂಗ್ರೆಸ್ಸಿಗರನ್ನು ಕುಟುಕಿದ್ದಾರೆ. ಕೌರವರು ಪಾಂಡವರನ್ನ ವನವಾಸಕ್ಕೆ ಕಳುಹಿಸುತ್ತಾರೆ. ಈ ಸಂದರ್ಭದಲ್ಲಿ ಕೌರವರು ಹಾಗೂ ಗಂಧರ್ವರ ನಡುವೆ ಯುದ್ದ ನಡೆಯುತ್ತೆ. ಗಂಧರ್ವರು ಕೌರವರನ್ನು ಸೆರೆ ಹಿಡಿಯುತ್ತಾರೆ. ಆಗ ಭೀಮ ಹಲ್ಲು ಕಡಿದು ಹೀಗೆ ಆಗಬೇಕಿತ್ತು ಎನ್ನುತ್ತಾನೆ. ಆಗ ಧರ್ಮರಾಯ ಅರ್ಜುನನಿಗೆ ಹೇಳಿ ಅವರನ್ನು ಬಿಡಿಸಿ ಕೊಂಡು ಬರಲು ಹೇಳುತ್ತಾನೆ. ಆಗ ಧರ್ಮರಾಯ ವಯಂ ಪಂಚಾದಿಕಂ ಶತಂ ಎಂಬ ಮಾತನ್ನು ಹೇಳುತ್ತಾನೆ ಎಂದರು.

Exit mobile version