Home ತಾಜಾ ಸುದ್ದಿ ಬಿಮ್ಸ್​ಗೆ ರಾಮಲಿಂಗಾರೆಡ್ಡಿ ಭೇಟಿ: ನಿರ್ವಾಹಕನ ಆರೋಗ್ಯ ವಿಚಾರಣೆ

ಬಿಮ್ಸ್​ಗೆ ರಾಮಲಿಂಗಾರೆಡ್ಡಿ ಭೇಟಿ: ನಿರ್ವಾಹಕನ ಆರೋಗ್ಯ ವಿಚಾರಣೆ

0

ಬೆಳಗಾವಿ: ಹಲ್ಲೆಗೆ ಒಳಗಾಗಿರುವ ಮಹಾದೇವ ಅವರ ಆರೋಗ್ಯ ಸ್ಥಿರವಾಗಿದ್ದು ಇನ್ನೇರಡು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಆಗಲಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಸಾರಿಗೆ ಸಂಸ್ಥೆಯ ಬಸ್ ನಿರ್ವಾಹಕ ಮಹಾದೇವ ಹುಕ್ಕೇರಿ ಅವರನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಜಿಲ್ಲಾಸ್ಪತ್ರೆಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿ ನಂತರ ಮಾತನಾಡಿದ ಅವರು ಮಹಾದೇವ ಹುಕ್ಕೇರಿ ತಮ್ಮ ಮೇಲೆ ಪೋಕ್ಸೋ ಪ್ರಕರಣ ದಾಖಲಾದ ಕಾರಣ ಆತಂಕಗೊಂಡಿದ್ದಾರೆ. ಈ ಪ್ರಕರಣ ಹಿಂದಕ್ಕೆ ಪಡೆಯುವ ಕುರಿತಂತೆ ಹಾಗೂ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ಜರುಗಿಸುವ ಸಂಬಂಧ ಗೃಹ ಸಚಿವ ಜಿ.ಪರಮೇಶ್ವರ ಅವರೊಂದಿಗೆ ಮಾತನಾಡುತ್ತೇನೆ ಎಂದರು.

ಬೆಳಗಾವಿಯಲ್ಲಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆದ ಬಳಿಕ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಎಂ.ಎಸ್‌.ಆರ್.ಟಿ.ಸಿ ಬಸ್ ಗೆ ಕನ್ನಡಿಗರು ಮಸಿ ಬಳಿದಿದ್ದರಿಂದ ಮಹಾರಾಷ್ಟ್ರದಲ್ಲಿ ನಮ್ಮ ಬಸ್ ಗಳಿಗೆ ಅವರು ಮಸಿ ಬಳಿಯುತ್ತಿದ್ದಾರೆ. ಇಂಥ ಪ್ರಕರಣಗಳಲ್ಲಿ ಯಾರೂ ಬಸ್ ಗಳಿಗೆ ಹಾನಿ ಮಾಡಬಾರದು, ಕರ್ನಾಟಕ-ಮಹಾರಾಷ್ಟ್ರ ಮಧ್ಯೆ ಬಸ್ ಸಂಚಾರ ಸ್ಥಗಿತಗೊಂಡ ಕಾರಣ, ಜನರು ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದ ಸಾರಿಗೆ ನಿಗಮಗಳಿಗೂ ನಷ್ಟವಾಗುತ್ತದೆ. ಇದು ಸರಿಯಲ್ಲ, ಮಹಾರಾಷ್ಟ್ರದ ಸಾರಿಗೆ ಇಲಾಖೆಯ ಕಾರ್ಯದರ್ಶಿಯವರೊಂದಿಗೆ ನಮ್ಮ ಸಾರಿಗೆ ಇಲಾಖೆ ಕಾರ್ಯದರ್ಶಿ ಪ್ರಸಾದವರಿಗೆ ಮಾತಾಡುವಂತೆ ಹೇಳಿದ್ದೇನೆ ಎಂದರು

Exit mobile version