Home ಸುದ್ದಿ ರಾಜ್ಯ ಬಿಜೆಪಿ ರಥಯಾತ್ರೆಗೆ ಸಂಚಾಲಕರ ನೇಮಕ

ಬಿಜೆಪಿ ರಥಯಾತ್ರೆಗೆ ಸಂಚಾಲಕರ ನೇಮಕ

0

ಬಿಜೆಪಿ ರಾಜ್ಯದ ನಾಲ್ಕು ದಿಕ್ಕುಗಳಿಂದಲು ರಥಯಾತ್ರೆ ಆರಂಭಿಸಲು ಮುಂದಾಗಿದ್ದು, ನಾಲ್ಕು ತಂಡಗಳ ರಥಯಾತ್ರೆಗೂ ಮೂವರು ಉಸ್ತುವಾರಿಗಳನ್ನು ನೇಮಕ ಮಾಡಿದೆ. ಬಿಜೆಪಿ ರಾಜ್ಯಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಮೋರ್ಚಾಗಳ ಸಮಾವೇಶ ಆಯೋಜನೆ ಜವಾಬ್ದಾರಿ ನೀಡಲಾಗಿದೆ. ಹಾಲಪ್ಪ ಆಚಾರ್, ಎಸ್.ಟಿ.ಸೋಮಶೇಖರ್ ತಂಡಕ್ಕೆ ಫಲಾನುಭವಿಗಳ ಸಮ್ಮೇಳನ ಆಯೋಜನೆ ಹೊಣೆ ನೀಡಲಾಗಿದೆ.
ಎಸ್.ವಿ.ರಾಘವೇಂದ್ರ ತಂಡಕ್ಕೆ ವಿಡಿಯೋ ವ್ಯಾನ್ ಪ್ರಚಾರದ ಹೊಣೆ ನೀಡಲಾಗಿದೆ. ಡಾ. ಕೆ ಸುಧಾಕರ್, ಬಿ.ಸಿ.ನಾಗೇಶ್ ಅವರಿಗೆ ಪ್ರಣಾಳಿಕೆ ತಯಾರಿ ಸಲಹಾ ಅಭಿಯಾನದ ಹೊಣೆ ನೀಡಲಾಗಿದೆ. ​​ರಥಯಾತ್ರೆ ಸಂಚಾಲಕರಾಗಿ ಸಚಿವ ಸಿ.ಸಿ. ಪಾಟೀಲ್ ಅವರನ್ನು ನೇಮಕ ಮಾಡಲಾಗಿದೆ. ಸಹ-ಸಂಚಾಲಕರಾಗಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ್ ಮತ್ತು ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ ನೇಮಕಗೊಂಡಿದ್ದಾರೆ.

Exit mobile version