Home ತಾಜಾ ಸುದ್ದಿ ಬಿಜೆಪಿ ಗೆಲುವು ದಾಖಲಿಸಿರುವುದು ರಾಷ್ಟ್ರಕ್ಕೆ ಒಂದು ಸಂದೇಶ

ಬಿಜೆಪಿ ಗೆಲುವು ದಾಖಲಿಸಿರುವುದು ರಾಷ್ಟ್ರಕ್ಕೆ ಒಂದು ಸಂದೇಶ

0

27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಗೆಲುವು

ಬೆಂಗಳೂರು: 27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಗೆಲುವು ದಾಖಲಿಸಿರುವುದು ರಾಷ್ಟ್ರಕ್ಕೆ ಒಂದು ಸಂದೇಶ ನೀಡಿದಂತಾಗಿದೆ. ಪ್ರಧಾನಿ ಮೋದಿ ಅವರ ವರ್ಚಸ್ಸು, ಆಡಳಿತದ ಕಾರ್ಯವೈಖರಿ, ಜನಪರ ಬಜೆಟ್ ಮಂಡನೆ ಇವೆಲ್ಲವೂ ದೆಹಲಿ ಮತದಾರರ ಮನಸ್ಸು ಗೆಲ್ಲಲು ಸಹಕರಿಸಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಸಂತಸ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು ದೆಹಲಿಯಲ್ಲಿ ಆಪ್, ಕಾಂಗ್ರೆಸ್ ಪಕ್ಷಗಳು ಉಚಿತ ಗ್ಯಾರಂಟಿಗಳನ್ನು ಘೋಷಿಸಿದರೂ ದೆಹಲಿಯ ಮತದಾರರು ಅವರನ್ನು ಮಕಾಡೆ ಮಲಗಿಸಿದ್ದಾರೆ. ದೆಹಲಿಯ ಜನತೆ ಭ್ರಷ್ಟಾಚಾರಕ್ಕೆ ತಕ್ಕ ಉತ್ತರ ಕೊಟ್ಟಿದ್ದಾರೆ. ದೇಶದ ಜನರ ಪ್ರೀತಿ ಪ್ರಧಾನಿ ಮೋದಿ ಮೇಲೆ ಇದೆ. ದೇಹಲಿ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮೋದಿ ನಾಯಕತ್ವ ಜನಪರ ನಂಬಿಕೆಗಳಿಗೆ ಮನ್ನಣೆ ಸಿಕ್ಕಿದೆ. ಭ್ರಷ್ಟಾಚಾರಕ್ಕೆ ಜನರು ಉತ್ತರ ಕೊಟ್ಟಿದ್ದಾರೆ ಕೇಜ್ರಿವಾಲ್ ಅಧಿಕಾರಕ್ಕೆ ಅಂಟಿ ಕೊಂಡಿದ್ದರು. ಕಾರು, ಮಫ್ಲರ್, ನಿಮಿಷಕ್ಕೊಮ್ಮೆ ಕೆಮ್ಮೋದು, ಎರಡು ಬೆಡ್ ರೂ ಫ್ಲ್ಯಾಟ್, ಈಗ ಶಿಷ್ ಮಹಲ್ ಅದಲ್ಲಿ 25 ರೂಮುಗಳ ಮನೆ, ಕಾರು ಎಸ್ಕಾರ್ಟ್ ಹೀಗೆ ರಾಜನ ರೀತಿ ಆಡಳಿತ ನಡೆಸುತ್ತಿರುವ ಕೇಜ್ರಿವಾಲ್ ಅವರನ್ನು ನೋಡಿ ಜನ ಬೇಸತ್ತಿದ್ದರು. ಕೇಜ್ರಿವಾಲ್ ಕ್ರೇಜ್ ಕಳೆದುಕೊಂಡಿದ್ದಾರೆ. ಹಾಗಾಗಿ ಇಂದು ದೆಹಲಿಯಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವಾಗಿದೆ ಎಂದರು.

Exit mobile version