ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಕಾರಣರಾದ ಶ್ರೀಸಾಮನ್ಯನಿಗೆ ನಮಸ್ಕಾರ
ಬೆಂಗಳೂರು: ದೆಹಲಿಯಲ್ಲಿ ನಡೆದ ಸಾರ್ವತ್ರಿಕ ಚುನಾವಣೆ 2025 ರಲ್ಲಿ ಬಿಜೆಪಿಗೆ ಐತಿಹಾಸಿಕ ಜನಾದೇಶ ಹಾಗೂ ಅಮೋಘ ಗೆಲುವು ಸಿಕ್ಕಿದೆ. ದೆಹಲಿಯ ಜನರು ಪ್ರಗತಿ ಮತ್ತು ಉತ್ತಮ ಆಡಳಿತವನ್ನು ಆಯ್ಕೆ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
ದೆಹಲಿ ಚುನಾವಣಾ ಪಲಿತಾಂಶ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಚುನಾವಣೆಯಲ್ಲಿ ಗೆಲವು ಸಾಧಿಸಿದ ಎಲ್ಲಾ ಬಿಜೆಪಿ ಅಭ್ಯರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. ಅವರ ವಿಶ್ವಾಸ ಮತ್ತು ಬೆಂಬಲಕ್ಕಾಗಿ ನಮ್ಮ ಸಮರ್ಪಿತ ಕಾರ್ಯಕರ್ತರು, ಪದಾಧಿಕಾರಿಗಳು ಮತ್ತು ಗೌರವಾನ್ವಿತ ಮತದಾರರಿಗೆ ಆಳವಾದ ಕೃತಜ್ಞತೆಗಳು.
27 ವರ್ಷಗಳ ಬಳಿಕ ರಾಜಧಾನಿಯಲ್ಲಿ ಕಮಲ ಅರಳಿದ್ದು, ದೆಹಲಿಯಲ್ಲಿ ನವಚೇತನ, ಹೆಚ್ಚಿನ ಅಭಿವೃದ್ಧಿಯತ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಹೆಜ್ಜೆಯಿಡಲಿದೆ. ನಮ್ಮ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರ ಅಚಲ ಮಾರ್ಗದರ್ಶನದ ನೇತೃತ್ವದಲ್ಲಿ ಈ ವಿಜಯವು ದೆಹಲಿಗೆ ಹೊಸ ಉದಯವನ್ನು ಸೂಚಿಸುತ್ತದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಕಾರಣರಾದ ಶ್ರೀಸಾಮನ್ಯನಿಗೆ ನಮಸ್ಕರಿಸುತ್ತಾ, ಪಕ್ಷದ ಸರ್ವರಿಗೂ ನನ್ನ ಹೃದಯಪೂರ್ವಕ ಅಭಿನಂದನೆಗಳು. ದೆಹಲಿಯ ಉಜ್ವಲ ಮತ್ತು ಸಮೃದ್ಧ ಭವಿಷ್ಯಕ್ಕಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದಿದ್ದಾರೆ.