ಮೂವರು ಸಾವು, ೭ ಜನರು ಗಂಭೀರ ಗಾಯ
ಬೀದರ್ : ಇಲ್ಲಿಯ ಬೀದರ್-ಉದಗಿರ್ ರಸ್ತೆ ಅತಿವಾಳ ಕ್ರಾಸ್ ಬಳಿ ಭಾನುವಾರ ಬೆಳಿಗ್ಗೆ ಮಹಾರಾಷ್ಟç ಸಾರಿಗೆ ಬಸ್ ಮತ್ತು ಆಟೋ ರೀಕ್ಷಾ ನಡುವಣ ಸಂಭವಿಸಿದ ಡಿಕ್ಕಿಯಿಂದಾಗಿ ಆಟೋದಲ್ಲಿದ್ದ ಮೂವರು ಪ್ರಯಾಣಿಕರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದರೆ, ಇತರೆ ಏಳು ಪ್ರಯಾಣಿಕರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.