Home ತಾಜಾ ಸುದ್ದಿ ಬಳ್ಳಾರಿಗೆ ಇಂದು ಆರೋಗ್ಯ ‌ಸಚಿವ ಗುಂಡೂರಾವ್

ಬಳ್ಳಾರಿಗೆ ಇಂದು ಆರೋಗ್ಯ ‌ಸಚಿವ ಗುಂಡೂರಾವ್

0

ಬಳ್ಳಾರಿ: ಬಾಣಂತಿಯರ ಸರಣಿ ಸಾವು ಹಿನ್ನೆಲೆಯಲ್ಲಿ ‌ಕೊನೆಗೂ ಎಚ್ಚೆತ್ತುಕೊಂಡ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಶನಿವಾರ ಬಳ್ಳಾರಿಗೆ ಭೇಟಿ ನೀಡಲಿದ್ದಾರೆ.
ಬಳ್ಲಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಹೆರಿಗೆ‌ಗೆ ದಾಖಲಾಗಿದ್ದ ಏಳು‌ ಜನ ಬಾಣಂತಿಯರ ಪೈಕಿ ಐವರು, ವಿಮ್ಸ್ ನಲ್ಲಿ ಒಬ್ಬರು ಸೇರಿ ಒಟ್ಟು ‌ಆರು ಜನ ಬಾಣಂತಿಯರು ಸಾವನಪ್ಪಿದ್ದಾರೆ. ಕಳಪೆ ಔಷಧ ಪೂರೈಕೆಯಿಂದಲೇ ಈ ಸಾವು ಸಂಭವಿಸಿದೆ ಎನ್ನುವ ‌ವರದಿ‌ ಕೂಡ‌ ಬಂದಿದ್ದು, ಇದು ಸರಕಾರದ ಪ್ರಾಯೋಜಿತ ಕೊಲೆ ಎಂದು ಪ್ರತಿಕ್ಷಗಳು ಆರೋಪ ಮಾಡಿದ್ದವು. ಆದರೂ ಜಿಲ್ಲಾ ಉಸ್ತುವಾರಿ ‌ಸಚಿವ ಜಮೀರ್ ಅಹ್ಮದ್ ಖಾನ್, ಆರೋಗ್ಯ ಸಚಿವ ದಿನೇಶ ಗುಂಡೂರಾವ್ ‌ಭೇಟಿ ನೀಡಿರಲಿಲ್ಲ. ಕೊನೆಗೂ ಎಚ್ಚೆತ್ತಿರುವ ಆರೋಗ್ಯ ‌ಸಚಿವ ಇಂದು ಬಳ್ಳಾರಿಯ ವಿಮ್ಸ್ ಆಸ್ಪತ್ರೆ ‌ಹಾಗೂ ಮೃತಪಟ್ಟ ಬಾಣಂತಿಯರ ಸ್ವಗ್ರಾಮಗಳಾದ ಕೂಡ್ಲಿಗಿ, ಬಸಕೋಡು ಸೇರಿ‌ ಮೃತ ಕುಟುಂಬಸ್ಥರ ಮನೆಗೆ ಭೇಟಿ‌ ನೀಡಿ ಸಾಂತ್ವಾನ ಹೇಳಲಿದ್ದಾರೆ.

Exit mobile version