Home ತಾಜಾ ಸುದ್ದಿ ಫ್ಲೈಓವರ್ ಕಾಮಗಾರಿ ಪ್ರಾಜೆಕ್ಟ್‌ನ ಕೋ ಆರ್ಡಿನೇಟರ್ ಬಂಧನ

ಫ್ಲೈಓವರ್ ಕಾಮಗಾರಿ ಪ್ರಾಜೆಕ್ಟ್‌ನ ಕೋ ಆರ್ಡಿನೇಟರ್ ಬಂಧನ

0

ಹುಬ್ಬಳ್ಳಿ: ಹುಬ್ಬಳ್ಳಿ ಹಳೇ ಕೋರ್ಟ ಸರ್ಕಲ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಫ್ಲೈಓವರ್ ಕಾಮಗಾರಿಯಲ್ಲಿ ಎಎಸ್‌ಐ ಮೃತಪಟ್ಟ ಪ್ರಕರಣದಲ್ಲಿ ಪ್ರಾಜೆಕ್ಟ್ ಕೋ ಆರ್ಡಿನೇಟರ್ ಬಂಧಿಸಲಾಗಿದೆ.
ಜಂಡು ಕಂಪನಿಯ ಪ್ರಾಜೆಕ್ಟ್ ಕೋಆರ್ಡಿನೇಟರ್ ಆಗಿದ್ದ ಹರಿಯಾಣ ರಾಜ್ಯದ ವಿಕಾಸ್ ಶರ್ಮ ಎಂಬಾತನನ್ನು ಬಂಧಸಿಲಾಗಿದೆ. ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸದೆ, ನೌಕರರ ನಿರ್ಲಕ್ಷತನದಿಂದ ಕಬ್ಬಿಣ ಪೈಪ್ ಎಎಸ್ ಐ ತಲೆಯ ಮೇಲೆ ಬಿದ್ದು, ಆಸ್ಪತ್ರೆಯಲ್ಲಿ ಉಪಚಾರ ಫಲಿಸದೇ ಮೃತಪಟ್ಟಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿ ತನಿಖೆಯಲ್ಲಿತ್ತು. ಈ ಘಟನೆಗೆ ಸಂಬಂಧಪಟ್ಟಂತೆ ಈಗಾಗಲೇ ಜಂಡು ಕನ್ಸ್ಟ್ರಕ್ಷನ್ ಕಂಪನಿಯ 3 ಜನ ಇಂಜಿನಿಯರ್ ಸೇರದಂತೆ ಒಟ್ಟು 11 ಜನ ನೌಕರರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜಪಡಿಸಲಾಗಿತ್ತು.
ಪ್ರಾಜೆಕ್ಟ್ ನ ಸಂಪೂರ್ಣ ಜವಾಬ್ದಾರಿ ನೋಡಿಕೊಳ್ಳುತ್ತಿದ್ದ ಜಂಡು ಕಂಪನಿಯ ಪ್ರಾಜೆಕ್ಟ್ ಕೋಆರ್ಡಿನೇಟರ್ ಆಗಿದ್ದ ಹರಿಯಾಣ ರಾಜ್ಯದ ವಿಕಾಸ್ ಶರ್ಮ ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Exit mobile version