Home ಅಪರಾಧ ಫೈನಾನ್ಸ್ ಕಿರುಕುಳಕ್ಕೆ ಆತ್ಮಹತ್ಯೆಗೆ ಯತ್ನ: ಮೂವರ ಬಂಧನ

ಫೈನಾನ್ಸ್ ಕಿರುಕುಳಕ್ಕೆ ಆತ್ಮಹತ್ಯೆಗೆ ಯತ್ನ: ಮೂವರ ಬಂಧನ

0

ಹುಬ್ಬಳ್ಳಿ: ಮೈಕ್ರೋ ಪೈನಾನ್ಸ್ ಕಿರುಕುಳ ಹುಬ್ಬಳ್ಳಿಗೂ ಕಾಲಿಟ್ಟಿದ್ದು, ಓರ್ವ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದ್ದು, ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಶ್ರೀಫಿನ್ ಕ್ರೆಡಿಟ್ ಪ್ರೈವೆಟ್ ಲಿಮಿಟೇಡ್ ನವನಗರದ ಮ್ಯಾನೇಜರ ವಿನೋದ ಶಿವಪುತ್ರಪ್ಪ ದಾಸ್ತಿಕೊಪ್ಪ, ಸುಚಿತ ಗಜಾನಂದ ಪಾಟೀಲ್ ಹಾಗೂ ಇಕ್ವಿಟಾಸ್ ಪೈನಾನ್ಸ್ ನ ಸುನೀಲ್ ಭಗವಂತ ಸೊರಾಳೆ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಕಮರಿಪೇಟ ಕುಂಬಾರ ಓಣಿ ನಿವಾಸಿ ಆರೀಫಾಬಾನು ಬಕಾಲ ೩.೬೮ ಲಕ್ಷ ಸಾಲ ಮಾಡಿದ್ದರು.
ಸಾಲ ಕಟ್ಟುವಂತೆ ಜೀವ ಬೆದರಿಕೆ ಹಾಕಿದ್ದರು.‌ಈ ಹಿನ್ನೆಲೆಯಲ್ಲಿ ಮಾಹಬೂಬಅಲಿ ಆತ್ಮಹತ್ಯೆಗೆ ಯತ್ನಿಸಿದ್ದು, ಕಮರಿಪೇಟೆಯಲ್ಲಿ ಪ್ರಕರಣ ದಾಖಲಾಗಿತ್ತು.

Exit mobile version