Home ತಾಜಾ ಸುದ್ದಿ ಫಿಲಂ ಚೇಂಬರ್ ಗರಂ: ಸೋನು ನಿಗಮ್ ಬ್ಯಾನ್

ಫಿಲಂ ಚೇಂಬರ್ ಗರಂ: ಸೋನು ನಿಗಮ್ ಬ್ಯಾನ್

0

ಸೋನು ನಿಗಮ್ ವಿರುದ್ಧ ಕಠಿಣ ಕ್ರಮ ಕೈಗೊಂಡ ಕನ್ನಡ ಚಿತ್ರರಂಗ

ಬೆಂಗಳೂರು: ಖ್ಯಾತ ಗಾಯಕ ಸೋನು ನಿಗಮ್‌ ವಿರುದ್ಧ ಕನ್ನಡ ಚಿತ್ರರಂಗದಿಂದ ಕಠಿಣ ನಿರ್ಣಯ ಕೈಗೊಂಡಿದೆ.
ಸೋನು ನಿಗಮ್ ವಿರುದ್ಧ ಕನ್ನಡ ಚಿತ್ರರಂಗದಿಂದ ಅಸಹಕಾರ ನಿರ್ಣಯ ಕೈಗೊಂಡಿದೆ. ಸೋನು ನಿಗಮ್‌ ಕನ್ನಡಿಗರ ಬಳಿ ಕ್ಷಮಾಪಣೆ ಕೇಳಬೇಕು. ಅಲ್ಲಿಯವರೆಗೂ ಕನ್ನಡ ಚಲನಚಿತ್ರರಂಗದಿಂದ ಸೋನು ನಿಗಮ್ ಅವರನ್ನ ದೂರ ಇಡೋದಕ್ಕೆ ಫಿಲ್ಮ್ ಚೇಂಬರ್ ನಿರ್ಧಾರ ಮಾಡಿದೆ.
ಮೇ 2ರಂದು ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಕನ್ನಡ ಹಾಡು ಹೇಳಿ ಎಂದಿದ್ದಕ್ಕೆ, ಇದಕ್ಕೇನೇ ಪಹಲ್ಗಾಮ್ ದಾಳಿ ನಡೆದಿದ್ದು ಎಂದ ಸೋನು ನಿಗಮ್ ಹೇಳಿಕೆ ನೀಡುವ ಮಊಲಕ ವಿವಾದ ಸೃಷ್ಟಿಸಿದ್ದರು. ಸೋನು ನಿಗಮ್ ಅವರ ವಿವಾದಾತ್ಮಕ ಹೇಳಿಕೆ ಕುರಿತಂತೆ ಇಂದು ನಡೆದ ಫಿಲ್ಮ್ ಚೇಂಬರ್ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ನರಸಿಂಹಲು ಮಾತನಾಡಿ, ಸಿನಿಮಾರಂಗದಲ್ಲಿ ಕಲಾವಿದರನ್ನ ಬ್ಯಾನ್ ಮಾಡುವಂತಿಲ್ಲ. ಆದರೆ ಗಾಯಕನನ್ನು ಕೆಲ ವರ್ಷ ದೂರವಿಟ್ಟು ಯಾರೂ ಅವಕಾಶ ಕೊಡದೆ ಬುದ್ಧಿ ಕಲಿಸಬಹುದು ಎಂದಿದ್ದಾರೆ. ಯಾವುದೇ ಸಿನಿಮಾದಲ್ಲಿ ಹಾಡಿಸುವುದು, ಮ್ಯೂಸಿಕಲ್ ನೈಟ್ಸ್ ಆಗಲಿ ಎಲ್ಲಿಯೂ ಸೋನ್ ನಿಗಮ್ ಅವರನ್ನು ಹಾಡಿಸದಿರಲು ಫಿಲ್ಮ್ ಚೇಂಬರ್ ನಿರ್ಧರಿಸಿದೆ. ಒಂದು ವೇಳೆ ಸೋನು ನಿಗಮ್ ಕ್ಷಮೆ ಕೇಳಿದರೂ ಅಸಹಕಾರ ಮುಂದುವರೆಸಲು ಕನ್ಮಡ ಫಿಲ್ಮ್ ಚೇಂಬರ್ ಹಾಗೂ ಅಂಗಸಂಸ್ಥೆಗಳು ತೀರ್ಮಾನ ಕೈಗೊಂಡಿವೆ.

Exit mobile version