Home ಕ್ರೀಡೆ ಫಿಟ್ ಇಂಡಿಯಾ ಮ್ಯಾರಥಾನ್ ಸ್ಪರ್ಧೆಗೆ ಚಾಲನೆ

ಫಿಟ್ ಇಂಡಿಯಾ ಮ್ಯಾರಥಾನ್ ಸ್ಪರ್ಧೆಗೆ ಚಾಲನೆ

0

ಶ್ರೀರಂಗಪಟ್ಟಣ ದಸರಾ-2024 ರ ಅಂಗವಾಗಿ ಅಕ್ಟೋಬರ್ 4 ರಂದು ಇಂದು ಬೆಳಿಗ್ಗೆ 7:00 ಗಂಟೆಗೆ ತಾಲೂಕು ಕ್ರೀಡಾಂಗಣದಿಂದ “ಫಿಟ್ ಇಂಡಿಯಾ ಮ್ಯಾರಥಾನ್” ಸ್ಪರ್ಧೆಗೆ ಚಾಲನೆ ನೀಡಲಾಯಿತು.

ಸ್ಪರ್ಧೆಯು ಗಂಜಾಂ ಮಾರ್ಗವಾಗಿ ಕರಿಫಟ್ಟ ದೇವಸ್ಥಾನದವರೆಗೆ ಸ್ಪರ್ಧೆ ನಡೆಯಲಿದ್ದು, 29 ವರ್ಷ ಒಳಗಿನ ಯುವಕ ಯುವತಿಯರು ಹಾಗೂ 30 ವರ್ಷ ಮೇಲ್ಪಟ್ಟ ಪುರುಷ ಮತ್ತು ಮಹಿಳೆಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ಶ್ರೀರಂಗಪಟ್ಟಣ ದಂಡಾಧಿಕಾರಿ ಪುರುಷೋತ್ತಮ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಓಂ ಪ್ರಕಾಶ್, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Exit mobile version