Home ತಾಜಾ ಸುದ್ದಿ ಫಸ್ಟ್ ರ‍್ಯಾಂಕ್ ರಾಜುವಿನ ಕಣ್ಮಣಿ ಬಿಡುಗಡೆ

ಫಸ್ಟ್ ರ‍್ಯಾಂಕ್ ರಾಜುವಿನ ಕಣ್ಮಣಿ ಬಿಡುಗಡೆ

0

ಫಸ್ಟ್ ರ‍್ಯಾಂಕ್ ರಾಜು ಖ್ಯಾತಿಯ ಗುರುನಂದನ್ ಹೊಸ ರೀತಿಯಿಂದಲೇ ಜನರ ಗಮನ ಸೆಳೆಯಲು ಸಜ್ಜಾಗಿದ್ದಾರೆ

ಬೆಂಗಳೂರು: ನಟ ಗುರುನಂದನ್ ಅಭಿನಯದ ರಾಜು ಜೇಮ್ಸ್ ಬಾಂಡ್ ಚಿತ್ರದ ಕಣ್ಮಣಿ ಗೀತೆ ಇಂದು ಬಿಡುಗಡೆಯಾಗಿದೆ.
ಇನ್ನುಳಿದಂತೆ ಈ ಚಿತ್ರದ ಮೂಲಕವೂ ಫಸ್ಟ್ ರ‍್ಯಾಂಕ್ ರಾಜು ಖ್ಯಾತಿಯ ರಾಜು (ಗುರುನಂದನ್) ಹೊಸ ರೀತಿಯಿಂದಲೇ ಜನರ ಗಮನ ಸೆಳೆಯಲು ಸಜ್ಜಾಗಿದ್ದಾರೆ. ಚಿತ್ರದಲ್ಲಿ ಗುರುನಂದನ್, ಮೃದುಲಾ, ಸಾಧು ಕೋಕಿಲ, ಅಚ್ಯುತ್ ಕುಮಾರ್, ಚಿಕ್ಕಣ್ಣ, ರವಿಶಂಕರ್, ಜೈ ಜಗದೀಶ್ ಅಭಿನಯಿಸಿದ್ದಾರೆ. ಕರ್ಮ ಬ್ರೋಸ್ ಪ್ರೊಡಕ್ಷನ್ಸ್ ನಿರ್ಮಾಣದ ಹಾಗೂ ದೀಪಕ್ ಮಧುವನಹಳ್ಳಿ ನಿರ್ದೇಶನದಲ್ಲಿ “ರಾಜು ಜೇಮ್ಸ್ ಬಾಂಡ್ ” ಚಿತ್ರದ ಬಿಡುಗಡೆ ದಿನಾಂಕ ಹೊಸವರ್ಷದ ಮೊದಲ ದಿನದಂದು ಘೋಷಣೆಯಾಗಿದೆ. ನಗುವೇ ಪ್ರಾಧಾನವಾಗಿರುವ ಈ ಚಿತ್ರ ಫೆಬ್ರವರಿ 14, ಪ್ರೇಮಿಗಳ ದಿನದಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

ಈ ಚಿತ್ರದ ಮನಮೋಹಕ ಹಾಡು ಕಣ್ಮಣಿ ಅನಾವರಣವಾಗೊಂಡಿದೆ, ಸಂಜಿತ್ ಹೆಗ್ಡೆ ಅವರ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ, ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ.

Exit mobile version