Home News ಪ್ರಶ್ನಿಸುವುದನ್ನು ಬೈದಿದ್ದಾರೆ ಎಂದು ಭಾವಿಸಿದರೆ ಹೇಗೆ..?

ಪ್ರಶ್ನಿಸುವುದನ್ನು ಬೈದಿದ್ದಾರೆ ಎಂದು ಭಾವಿಸಿದರೆ ಹೇಗೆ..?

ಹುಬ್ಬಳ್ಳಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ನಾನು ಯಾವತ್ತೂ ಬೈದಿಲ್ಲ. ನಾನು ಅವರನ್ನು ಪ್ರಶ್ನಿಸಿರುವುದನ್ನೆ ಬೈದಿದ್ದೇನೆ ಎಂದು ಭಾವಿಸಿ ಕೆಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಕೆಲ ಬಿಜೆಪಿ ನಾಯಕರು ನನ್ನ ಮೇಲೆ ಹರಿಹಾಯುತ್ತಾರೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ ಗ್ರಾಮದಲ್ಲಿ ನೆರೆ ಹಾವಳಿ ಪೀಡಿತ ಪ್ರದೇಶ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅವರಿಗೆ ಪ್ರಶ್ನೆ ಮಾಡಿದರೆ ಸಾಕು ನನ್ನ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವುದಾಗಿ ಬಿಜೆಪಿ ನಾಯಕರು ಮಾತನಾಡುತ್ತಾರೆ ಎಂದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ದೇಶದಲ್ಲಿ ದೇವಮಾನವನ್ನಾಗಿ ಮಾಡಿದ್ದಾರೆ. ಅವರನ್ನು ಪ್ರಶ್ನಿಸಿದರೆ ಕೆಲ ಬಿಜೆಪಿ ನಾಯಕರು ನಮ್ಮ ವಿರುದ್ಧ ಹರಿಹಾಯುತ್ತಾರೆ. ಅದೇ ಬಿಜೆಪಿ ನಾಯಕರು ಬೇರೆ ಪಕ್ಷದ ನಾಯಕರಿಗೆ ಸಿಂಗಲ್ ವರ್ಡ್ ಬಳಕೆ ಮಾಡಿ ಮಾತನಾಡಬಹುದು. ಅದೇ ದೇಶದ ಅಭಿವೃದ್ಧಿ ಬಗ್ಗೆ ಇವರು ಮಾತನಾಡುವುದಿಲ್ಲ ಎಂದು ಹೇಳಿದರು.
ಇತ್ತೀಚೆಗೆ ವ್ಯಾಪಂ ಪ್ರಕರಣದಲ್ಲಿ ೪೪ ಜನರ ಕೊಲೆಯಾಗಿದೆ ಈ ವಿಚಾರದ ಬಗ್ಗೆಯಾಗಲಿ, ಬಿಎಸ್‌ಎನ್‌ಎಲ್ ಅನುಭವಿಸುತ್ತಿರುವ ನಷ್ಟದ ಬಗ್ಗೆ ಚರ್ಚಿಸಲ್ಲ. ಮೇಕ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ ಎಂದು ಹೇಳುವ ಬಿಜೆಪಿ ನಾಯಕರು ಒಂದೇ ಒಂದು ಏರ್ ಪಿನ್, ಬಾಚಣಿಕೆ ತಯಾರಿಸಿಲ್ಲ ಎಂದು ಕಿಡಿ ಕಾರಿದರು.

Exit mobile version