Home ತಾಜಾ ಸುದ್ದಿ ಪ್ರಯಾಣಿಕರಿಗೆ ಜೈ ಎಂದ ನಮ್ಮ ಮೆಟ್ರೋ…

ಪ್ರಯಾಣಿಕರಿಗೆ ಜೈ ಎಂದ ನಮ್ಮ ಮೆಟ್ರೋ…

0

ಹೊಸ ಟಿಕೆಟ್ ರೇಟ್ ಘೋಷಿಸಲು BMRCL ನಿರ್ಧಾರ

ಬೆಂಗಳೂರು: ಮೆಟ್ರೋ ಟಿಕೆಟ್‌ ದರದ ಹೊಸ ಸ್ಲ್ಯಾಬ್ ಪ್ರಕಟ ಮಾಡುತ್ತೇವೆ ಎಂದು ಮಹೇಶ್ವರ ರಾವ್ ಹೇಳಿದ್ದಾರೆ.
ಬೆಂಗಳೂರು ನಗರದ ಪ್ರಯಾಣಿಕರ ಜೀವನಾಡಿಯಾಗಿರುವ ನಮ್ಮ ಮೆಟ್ರೋ ಪ್ರಯಾಣ ದರ ಕುರಿತಂತೆ BMRCL ಎಂಡಿ ಮಹೇಶ್ವ‌ರ್ ರಾವ್‌ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಎಲ್ಲಿ ದರ ಇಳಿಕೆ ಸಾಧ್ಯವಿದೆಯೋ ಅಲ್ಲಿ ಇಳಿಸಲಾಗುವುದು. ಸ್ಟೇಜ್ ಆಧಾರದಲ್ಲಿ ದರ ಇಳಿಕೆ ಮಾಡಲಾಗುತ್ತದೆ. ಶೇ.45ರಿಂದ 50ರವರೆಗೆ ದರ ಹೆಚ್ಚಳವಾಗಿರುವಲ್ಲಿ ಇಳಿಕೆ ಮಾಡಲಾಗುತ್ತದೆ ಎಂದು ತಿಳಿಸಿದರು. 2010 ರಿಂದ ನಮ್ಮ‌ ಮೆಟ್ರೋ ಶುರುವಾಗಿದೆ. ಕಳೆದ 15 ವರ್ಷದಿಂದ ನಡೆಸುತ್ತಿದ್ದೇವೆ. ಕಳೆದ ನಾಲ್ಕೈದು ವರ್ಷದಿಂದ ದರ ನಿಗದಿ ಮಾಡಲು ಕೇಳಿದ್ದೆವು. ಸದ್ಯ ಟಿಕೆಟ್ ದರ ನಿಗದಿ ವರದಿಯ ಅನ್ವಯ ಟಿಕೆಟ್ ದರ ಏರಿಕೆ ಮಾಡಿದ್ದೇವೆ. ಅಸಹಜವಾಗಿ ಟಿಕೆಟ್ ದರ ಏರಿಕೆ ಮಾಡಿದ್ದಾರೆ ಅಂತ ದೂರುಗಳು ಬಂದಿವೆ. ಇದರನ್ವಯ ನಾವು ಸಾಕಷ್ಟು ಚರ್ಚೆ ಮಾಡಿದ್ದೇವೆ. ಬೋರ್ಡ್ ಮೆಂಬರ್‌ಗಳ ಜೊತೆ ಕೂಡ ಇದರ ಬಗ್ಗೆ ಚರ್ಚೆ ಮಾಡಿದ್ದೇವೆ. ಜೊತೆಗೆ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರೂ ಟಿಕೆಟ್ ದರದ ಬಗ್ಗೆ ಪರಿಶೀಲಿಸಲು ತಿಳಿಸಿದ್ದಾರೆ, ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯಿಂದ ಬಿಎಂಆರ್‌ಸಿಎಲ್ ಬೋರ್ಡ್ ಮೀಟಿಂಗ್ ಹಾಗೂ ಸೆಕ್ರೆಟರಿ ಜೊತೆ ನಾವು ಚರ್ಚೆ ಮಾಡಿದ್ದೇವೆ. ಕೆಲವು ಕಡೆ ಶೇ.100ರಷ್ಟು ಹಾಗೂ ಶೇ90ರಷ್ಟು ಹೆಚ್ಚಳವಾಗಿದೆ. ಎಲ್ಲೆಲ್ಲಿ ಅತಿಹೆಚ್ಚು ಬೆಲೆ ಹೆಚ್ಚಾಗಿದೆಯೋ ಅಲ್ಲಿ ಬದಲಾವಣೆ ಮಾಡುತ್ತೇವೆ. ಟಿಕೆಟ್ ದರ ಏರಿಕೆ ಮಾಡಿರೋದನ್ನ ಬದಲಾವಣೆ ಮಾಡಿದ್ರೆ ಶೇ.45 ರಷ್ಟು ಮಾತ್ರ ಹೆಚ್ಚಳಕ್ಕೆ ತರುತ್ತೇವೆ. ಇದರಿಂದ ಜನರಿಗೆ ರಿಲೀಫ್ ಸಿಗುತ್ತದೆ ಎಂದರು. ಇನ್ನೂ ಎಷ್ಟು ಪ್ರಮಾಣದಲ್ಲಿ ದರ ಇಳಿಕೆಯಾಗುತ್ತದೆ ಎನ್ನುವ ಬಗ್ಗೆ ಸ್ಪಷ್ಟನೆ ನೀಡಿಲ್ಲವಾದರು. ದರ ಇಳಿಕೆ ಬಹುತೇಕ ಖಚಿತವಾಗಿದೆ. ಮುಂದಿನ ದಿನಗಳಲ್ಲಿ ನಿಖರ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

Exit mobile version