Home ನಮ್ಮ ಜಿಲ್ಲೆ ಚಿಕ್ಕಮಗಳೂರು ಪ್ರಧಾನಿ ನರೇಂದ್ರ ಮೋದಿ ಪಾಪಾದ ಕೊಡ ತುಂಬಿದೆ

ಪ್ರಧಾನಿ ನರೇಂದ್ರ ಮೋದಿ ಪಾಪಾದ ಕೊಡ ತುಂಬಿದೆ

0


ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಪಾಪಾದ ಕೊಡ ತುಂಬಿದೆ, ಈ ದೇಶ ಕಂಡ ಅತ್ಯಂತ ದುರ್ಬಲ ಪ್ರಧಾನಿ, ಭ್ರಷ್ಟಾಚಾರಕ್ಕೆ ಪ್ರತ್ಯೇಕ್ಷವಾಗಿ ಇಲ್ಲದೆ ಹೋದರೂ ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ ಎಂದು ಕಾಂಗ್ರೆಸ್‌ನ ಸತ್ಯ ಶೋಧನಾ ಸಮಿತಿಯ ಅಧ್ಯಕ್ಷ ವಿ.ಎಸ್. ಉಗ್ರಪ್ಪ ಆರೋಪಿಸಿದರು.
ಅವರು ನಗರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಒಂದೆಡೆ ರೈತರ ಮೇಲೆ ದೌರ್ಜನ್ಯ, ಇನ್ನೊಂದೆಡೆ ಈ ದೇಶದಲ್ಲಿ ನಿರುದ್ಯೋಗ, ಬಡತನ ಸಮಸ್ಯೆ, ಸಾಲದ ಪ್ರಮಾಣದಲ್ಲೂ ಏರಿಕೆಯಾಗಿದೆ. ಬೆಲೆ ಏರಿಕೆಯಾಗಿದೆ. ದೇಶ ಭೂ ಪ್ರದೇಶ ಉಳಿಸಿಕೊಳ್ಳುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಹೇಳಿದರು.
ವಿರೋಧ ಪಕ್ಷದವರನ್ನು ಶತೃಗಳಂತೆ ನೋಡುತ್ತಿದ್ದಾರೆ. ೩ನೇ ಬಾರಿ ಪ್ರಧಾನಿಯಾಗಿದ್ದಾಗ ಬದಲಾವಣೆ ಆಗುತ್ತದೆ ಎಂದು ಕೊಂಡಿದ್ದೆ ಆದರೂ ಆಗಲಿಲ್ಲ, ನಿನ್ನೆ ನಡೆದ ನೀತಿ ಆಯೋಗದ ಸಭೆಯಲ್ಲೂ ದ್ವೇಷದ ಪ್ರವೃತ್ತಿಯನ್ನು ಮುಂದುವರೆಸಿದ್ದಾರೆ. ಚಂದ್ರಬಾಬು ನಾಯ್ಡು ಅವರಿಗೆ ೨೦ ನಿಮಿಷ ಭಾಷಣ ಮಾಡಲು ಅವಕಾಶ ನೀಡಿದರು. ಮಮತಾ ಬ್ಯಾನರ್ಜಿಯವರಿಗೆ ೫ ನಿಮಿಷ ಕಾಲಾವಕಾಶ ಕೊಟ್ಟಿದ್ದಾರೆ ಎಂದರು.

Exit mobile version