ದಾವಣಗೆರೆ: ಪೊಲೀಸ್ ಬಲವನ್ನು ಉಪಯೋಗಿಸಿ ಕಾಂಗ್ರೆಸ್ ನನ್ನ ಮೇಲೆ ದೈಹಿಕ ಹಲ್ಲೆ ನಡೆಸಿದೆ ಎಂದು ಪರಿಷತ್ ಸದಸ್ಯ ಸಿ.ಟಿ. ರವಿ ಆರೋಪಿಸಿದ್ದಾರೆ.
ದಾವಣಗೆರೆಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 4 ಜಿಲ್ಲೆಗಳು, 50ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸತತ 11 ಗಂಟೆಗಳ ಕಾಲ ಸುತ್ತಾಡಿಸಿದ್ದಾರೆ. ನನ್ನನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗಿಸುವ ಪ್ರಯತ್ನ ನಡೆದಿದೆ. ಆದರೆ ನಾನು ಕುಗ್ಗುವುದಿಲ್ಲ ಎಂದರು.