Home News ಪತ್ನಿಯ ಸೀಮಂತದಂದೇ ಪತಿ ಸಾವು

ಪತ್ನಿಯ ಸೀಮಂತದಂದೇ ಪತಿ ಸಾವು

ಮಂಗಳೂರು: ಪತ್ನಿಯ ಸೀಮಂತದ ದಿನದಂತೆ ಪತಿ ಕುಸಿದು ಬಿದ್ದು ಸಾವನಪ್ಪಿದ ಘಟನೆ ಬಂಟ್ವಆಳ ವಿಟ್ಲ ಸಮೀಪದ ಕನ್ಯಾನದಲ್ಲಿ ಇಂದು ನಡೆದಿದೆ.
ಮೃತರನ್ನು ಕನ್ಯಾನ ಮಿತ್ತನಡ್ಕ ನಿವಾಸಿ ಪಿಕಪ್ ವಾಹನದ ಚಾಲಕ ಸತೀಶ್ (೩೩) ಎಂದು ಗುರುತಿಸಲಾಗಿದೆ. ಸತೀಶ್ ಅವರ ಪತ್ನಿಯ ಸೀಮಂತ ಶುಕ್ರವಾರ ನಿಗದಿಯಾಗಿತ್ತು. ಪತ್ನಿಯ ಸೀಮಂತ ಕಾರ್ಯಕ್ರಮದ ಸಿದ್ದತೆಯಲ್ಲಿ ತೊಡಗಿದ್ದ ವೇಳೆ ಮನೆಯಲ್ಲಿ ಬೆಳಿಗ್ಗೆ ಕುಸಿದು ಬಿದ್ದಿದ್ದಾರೆ. ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಯಿತು. ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸೀಮಂತದ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ಆಕ್ರಂದನ ಮುಗಿಲು ಮುಟ್ಟಿದೆ. ಸಾವಿಗೆ ವೈದ್ಯಕೀಯ ಕಾರಣ ತಿಳಿದು ಬಂದಿಲ್ಲ.

Exit mobile version