ಚಿಕ್ಕೋಡಿ: ಪತ್ನಿ ಸರಸಕ್ಕೆ ಬಾರದ ಹಿನ್ನೆಲೆ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಗಂಡನನ್ನು ಪತ್ನಿಯೇ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ನಡೆದಿದೆ.
ಶ್ರೀಮಂತ ಇಟ್ನಾಳ್ ಪತ್ನಿ ಸಾವಿತ್ರಿಯಿಂದ ಕೊಲೆಯಾದವ. ಒಬ್ಬಳಿಗೆ ಶವ ಸಾಗಿಸಲು ಆಗಲ್ಲ ಎಂದು ದೇಹವನ್ನು ೨ ತುಂಡು ಮಾಡಿ ಬ್ಯಾಗ್‌ನಲ್ಲಿ ಸಾಗಿಸಿದ್ದಳು. ನಂತರ ಗದ್ದೆಯಲ್ಲಿ ಶವವನ್ನು ಹಾಗೆಯೇ ಜೋಡಿಸಿಟ್ಟು ಹೂತು ಹಾಕಿದ್ದಾಳೆ. ನಂತರ ಆತನ ಬಟ್ಟೆ ಸೇರಿದಂತೆ ಹಲವು ವಸ್ತುಗಳನ್ನು ಸುಟ್ಟು ಹಾಕಿದ್ದಾಳೆ. ಪೊಲೀಸರು ತೀವ್ರ ವಿಚಾರಣೆ ನಡೆಸಿದ ಬಳಿಕ ಆರೋಪಿ ಸಾವಿತ್ರಿ ತಪ್ಪೊಪ್ಪಿಕೊಂಡಿದ್ದಾಳೆ. ಈ ಕುರಿತು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.