ಹುಬ್ಬಳ್ಳಿ: ನನ್ನ ಮಗನಿಗೆ ನ್ಯಾಯಾಲಯ ಏನು ಶಿಕ್ಷೆ ಕೊಡುತ್ತದೆಯೋ ಕೊಡಲಿ. ಅವನಿಂದ ನಮ್ಮ ಮಾನ ಮರ್ಯಾದೆ ಎಲ್ಲಾ ಹೋಗಿದೆ. ಅವನನ್ನು ನಾನು ನೋಡಲು ಹೋಗುವುದಿಲ್ಲ ಎಂದು ಅಂಜಲಿ ಕೊಲೆ ಮಾಡಿದ ಆರೋಪಿ ಗಿರೀಶ್ ತಾಯಿ ಅಳಲು ತೋಡಿಕೊಂಡರು.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಮಗ ಮಾಡಿದ್ದು ತಪ್ಪೇ. ಅವನಿಗೆ ನ್ಯಾಯಾಲಯ ಏನು ಶಿಕ್ಷೆ ಕೊಡುತ್ತೋ ಕೊಡಲಿ ಎಂದು ಗಿರೀಶ ತಾಯಿ ಶ್ವೇತಾ ಸಾವಂತ ಹೇಳಿದರು.
ಅವನನ್ನು ಕಿಮ್ಸ್ ಆಸ್ಪತ್ರೆಗೆ ಕರೆ ತಂದಿದ್ದರೂ ನಾನು ನೋಡಲು ಹೋಗಿಲ್ಲಾ ಹೋಗುವುದೂ ಇಲ್ಲ. ಅವನು ಈ ಹಿಂದೆ ಬೈಕ್ ಕಳ್ಳತನ ಮಾಡಿದ್ದು ಗೊತ್ತಿತ್ತು. ಅವನಿಗೆ ಅವಾಗ ಎಷ್ಟೇ ಬುದ್ದಿವಾದ ಹೇಳಿದರೂ ಕೇಳ್ತಿರಲಿಲ್ಲಾ. ಆರು ತಿಂಗಳುಗಳಿಂದ ಆತ ನಮ್ಮ ಮನೆಗೆ ಬಂದಿರಲಿಲ್ಲ ಎಂದರು. ಕಳೆದ ಒಂದು ತಿಂಗಳಿನಿಂದ ಪೋನ್ ಮಾಡಿರಲಿಲ್ಲ. ಯಾವ ಊರಿನಲ್ಲಿ ಇದ್ದ ಎಂಬುದು ಗೊತ್ತಿರಲಿಲ್ಲ.
ನನ್ನ ಮಗ ಅಂಜಲಿಯನ್ನು ಮದುವೆ ಮಾಡಿಕೊಳ್ಳುವುದಾಗಿ ನನ್ನ ಮುಂದೆ ಹೇಳಿಕೊಂಡಿದ್ದ ಎಂದು ಆರೋಪಿ ವಿಶ್ವನಾಥ ಅಲಿಯಾಸ್ ಗಿರೀಶ್ ಸಾವಂತ್ ತಾಯಿ ಸವಿತಾ ಹೇಳಿದರು.
ಅಂಜಲಿಯನ್ನು ವಿಶ್ವನಾಥ ಹತ್ಯೆ ಮಾಡಿರುವುದು ತಪ್ಪು, ಅವನಿಗೆ ನ್ಯಾಯಾಲಯ ಶಿಕ್ಷೆ ನೀಡುತ್ತದೆ, ನೀಡಲಿ, ನ್ಯಾಯಾಲಯ ಯಾವ ತೀರ್ಪ ನೀಡುತ್ತೋ ನೀಡಲಿ, ಅವನ ತಪ್ಪಿಗೆ ಶಿಕ್ಷೆಯಾಗಲಿ. ಅಂತಹ ಮಗ ನಮಗೆ ಬೇಡ ಎಂದರು. ಮಗ ಮಾಡಿದ ತಪ್ಪಿಗೆ ಈಗ ಮನೆ ಓನರ್ ಕೂಡಾ ನಮ್ಮನ್ನು ಮನೆ ಬಿಡು ಅಂತಿದ್ದಾರೆ.ಏನು ಮಾಡಬೇಕೆಂದು ತೋಚುತ್ತಿಲ್ಲಾ ಎಂದು ಅಳಲು ತೋಡಿಕೊಂಡಿದ್ದಾರೆ.