Home ಅಪರಾಧ ನೇಹಾ ಹತ್ಯೆ: ಸ್ಥಳ ಮಹಜರು ವೇಳೆ ಎಬಿವಿಪಿ ಪ್ರತಿಭಟನೆ

ನೇಹಾ ಹತ್ಯೆ: ಸ್ಥಳ ಮಹಜರು ವೇಳೆ ಎಬಿವಿಪಿ ಪ್ರತಿಭಟನೆ

0

ಹುಬ್ಬಳ್ಳಿ: ನೇಹಾ ಕೊಲೆ ಪ್ರಕರಣದ ಆರೋಪಿ ಫಯಾಜ್‌ನನ್ನು ಸ್ಥಳ ಮಹಜರು ಮಾಡಲು ಸಿಐಡಿ ಅಧಿಕಾರಿಗಳು ಬಿವಿಬಿ ಕಾಲೇಜಿಗೆ ಕರೆದೊಯ್ಯುವಾಗ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಫಯಾಜ್‌ನನ್ನು ಕರೆದುಕೊಂಡು ಬಂದ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ, ಪೊಲೀಸರು ಕಾರ್ಯಕರ್ತರನ್ನು ತಡೆದರು‌. ಆ ವೇಳೆ ಪರಸ್ಪರ ವಾಗ್ವಾದ ನಡೆಯಿತು.
‘ನಮ್ಮ ಕಾಲೇಜಿನ ಆವರಣದಲ್ಲಿ ಕೊಲೆ ನಡೆದಿದೆ. ಆರೋಪಿಗೆ ಶಿಕ್ಷೆಯಾಗಬೇಕು. ಪ್ರಕರಣದ ತನಿಖೆ ಸಿಬಿಐಗೆ ಒಪ್ಪಿಸಬೇಕು. ಇಲ್ಲದಿದ್ದರೆ, ಆರೋಪಿಯನ್ನು ನಮ್ಮ ಕೈಗೆ ಒಪ್ಪಿಸಿ’ ಎಂದು ಕಾರ್ಯಕರ್ತರು ಆಗ್ರಹಿಸಿದರು.

Exit mobile version