Home ತಾಜಾ ಸುದ್ದಿ ನೂತನ ಮುಖ್ಯಮಂತ್ರಿ ಘೋಷಣೆ

ನೂತನ ಮುಖ್ಯಮಂತ್ರಿ ಘೋಷಣೆ

0

ಶ್ರೀನಗರ: ಮೈತ್ರಿಕೂಟ ಜಯಗಳಿಸಿದ ಬೆನ್ನಲ್ಲೇ ಜಮ್ಮು ಕಾಶ್ಮೀರದ ನೂತನ ಮುಖ್ಯಮಂತ್ರಿಯಾಗಿ ಒಮರ್‌ ಅಬ್ದುಲ್ಲಾ ಆಯ್ಕೆ ಆಗಿದ್ದಾರೆ.
ಕಾಶ್ಮೀರದ ಮಾಜಿ ಸಿಎಂ ಫಾರೂಖ್‌ ಅಬ್ದುಲ್ಲಾ ಅವರು ಒಮರ್‌ ಅಬ್ದುಲ್ಲಾ ಅವರನ್ನು ಮುಂದಿನ ಸಿಎಂ ಎಂದು ಘೋಷಣೆ ಮಾಡಿದ್ದು. ಜನರು ತಮ್ಮ ಜನಾದೇಶವನ್ನು ನೀಡಿದ್ದಾರೆ. ಕೇಂದ್ರದ ನರೇಂದ್ರ ಮೋದಿ ಸರ್ಕಾರ ಆಗಸ್ಟ್ 5 ರಂದು (ಆರ್ಟಿಕಲ್ 370 ರದ್ದತಿ) ತೆಗೆದುಕೊಂಡ ನಿರ್ಧಾರವನ್ನು ನಾವು ಒಪ್ಪುವುದಿಲ್ಲ ಎಂದು ಜನರು ಸಾಬೀತುಪಡಿಸಿದ್ದಾರೆ. ಒಮರ್ ಅಬ್ದುಲ್ಲಾ ಅವರು ಜಮ್ಮು ಕಾಶ್ಮೀರದ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ’ ಎಂದು ಹೇಳಿದರು.
ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷನಾಗಿರುವ ಒಮರ್ ಅಬ್ದುಲ್ಲಾ ಬುದ್ಗಾಮ್ ಮತ್ತು ಗಂದರ್ಬಾಲ್ ಕ್ಷೇತ್ರಗಳಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಅಬ್ದುಲ್ಲಾ ಕುಟುಂಬಕ್ಕೆ ಮೂರು ತಲೆಮಾರುಗಳಿಂದ ಗಂದೇರ್ಬಾಲ್ ಕ್ಷೇತ್ರ ಭದ್ರಕೋಟೆಯಾಗಿದೆ.

Exit mobile version