Home ತಾಜಾ ಸುದ್ದಿ ನಿಮ್ಮ ಪಕ್ಷ ‘ಜಿಲೇಬಿ’ ತಿನ್ನುವಂತಾಗಲಿ

ನಿಮ್ಮ ಪಕ್ಷ ‘ಜಿಲೇಬಿ’ ತಿನ್ನುವಂತಾಗಲಿ

0

ಬೆಂಗಳೂರು: ಜಮ್ಮು & ಕಾಶ್ಮೀರದಲ್ಲಿರುವ 90 ಸೀಟುಗಳಲ್ಲಿ, ಕಾಂಗ್ರೆಸ್ ಗೆದ್ದಿರುವುದೇ 6 ಸೀಟುಗಳು. ಅಂದರೆ 10% ನಷ್ಟು ಸೀಟುಗಳು ನಿಮ್ಮ ಪಾಲಾಗಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಜಮ್ಮು ಕಾಶ್ಮೀರದಲ್ಲಿದ್ದ 4 ಮೀಸಲು ಸೀಟುಗಳು ಬಿಜೆಪಿ ಪಾಲಾಗಿದೆ, ಜಮ್ಮು & ಕಾಶ್ಮೀರದಲ್ಲಿ ಬಿಜೆಪಿ ಏಕಾಂಗಿ ಹೋರಾಟ ಮಾಡಿತ್ತು, ಪ್ರಧಾನಿ ಮೋದಿ ಜಿ ಅವರು ಕಣಿವೆಯಲ್ಲಿ ಪರಿಚಯಿಸಿರುವ ಅನೇಕ ಜನೋಪಯೋಗಿ ಯೋಜನೆಗಳಿಂದ, ಆರ್ಟಿಕಲ್ 370 ರದ್ದು ಮಾಡಿದ್ದರಿಂದ ಕಣಿವೆಯ ಪ್ರಜ್ಞಾವಂತ ಮತದಾರರು ಬಿಜೆಪಿಗೆ 29 ಸೀಟುಗಳನ್ನು ನೀಡಿದ್ದಾರೆ. 100 ವರ್ಷಕ್ಕೂ ಹೆಚ್ಚು ಇತಿಹಾಸವಿರುವ ರಾಷ್ಟ್ರೀಯ ಪಕ್ಷವು 10% ಸೀಟುಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ.
ಈ ಕಳಪೆ ಸಾಧನೆಯನ್ನು ಹೊಗಳುವಂತದ್ದು ಕಾಂಗ್ರೆಸ್ ಪಕ್ಷದಿಂದಷ್ಟೇ ಸಾಧ್ಯ. ಮುಂಬರುವ ಚುನಾವಣೆಯಲ್ಲಿ ನಿಮ್ಮ ಪಕ್ಷ ‘ಜಿಲೇಬಿ’ ತಿನ್ನುವಂತಾಗಲಿ ಎಂದು ಆಶಿಸುವ ನಿಮ್ಮ ಹಿತೈಷಿ ಎಂದಿದ್ದಾರೆ.

Exit mobile version