Home ಅಪರಾಧ ನಿಂತಿದ್ದ ಕಾರಿಗೆ ಟ್ರಕ್ ಡಿಕ್ಕಿ – ಮಗು ಸೇರಿ 6 ಜನರಿಗೆ ಗಂಭೀರ ಗಾಯ

ನಿಂತಿದ್ದ ಕಾರಿಗೆ ಟ್ರಕ್ ಡಿಕ್ಕಿ – ಮಗು ಸೇರಿ 6 ಜನರಿಗೆ ಗಂಭೀರ ಗಾಯ

0

ಯಲ್ಲಾಪುರ: ಟ್ರಾಫಿಕ್‌ನಲ್ಲಿ ನಿಂತಿದ್ದ ಫಾರ್ಚುನರ್ ಕಾರಿಗೆ ಹಿಂಭಾಗದಿಂದ ಡಾಂಬರ್ ಮಿಕ್ಸರ್ ಟ್ರಕ್ ಡಿಕ್ಕಿಯಾಗಿ ಮಗು ಸೇರಿ 6 ಜನ ಗಂಭೀರವಾಗಿ ಗಾಯಗೊಂಡ ಘಟನೆ ಯಲ್ಲಾಪುರದ ಅರೆಬೈಲ್ ಘಟ್ಟದಲ್ಲಿ ನಡೆದಿದೆ
ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಂಡವರ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಕಾರು ಬೆಳಗಾವಿಯಿಂದ ಧರ್ಮಸ್ಥಳಕ್ಕೆ ತೆರಳುತಿತ್ತು. ಅರೆಬೈಲ್ ಘಟ್ಟದ ಬಳಿ ಟ್ರಾಫಿಕ್‌ನಲ್ಲಿ ಕಾರು ನಿಂತಿದ್ದ ವೇಳೆ ಹಿಂದಿನಿಂದ ಅತೀ ವೇಗವಾಗಿ ಬಂದ ಟ್ರಕ್ ಕಾರಿಗೆ ಡಿಕ್ಕಿಯಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮುಂಭಾಗದಲ್ಲಿ ನಿಂತಿದ್ದ ಕಂಟೈನರ್ ಲಾರಿಗೆ ಕಾರು ಅಪ್ಪಳಿಸಿದೆ. ಅಪಘಾತದ ಬಳಿಕ ಟ್ರಕ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ ಗಾಯಗೊಂಡ ಅರು ಜನರನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version