Home ತಾಜಾ ಸುದ್ದಿ ನಾಳೆಯಿಂದಲೇ ಶಿವಮೊಗ್ಗದಿಂದ ಮೂರು ಹೊಸ ಮಾರ್ಗಗಳಿಗೆ ವಿಮಾನ ಹಾರಾಟ

ನಾಳೆಯಿಂದಲೇ ಶಿವಮೊಗ್ಗದಿಂದ ಮೂರು ಹೊಸ ಮಾರ್ಗಗಳಿಗೆ ವಿಮಾನ ಹಾರಾಟ

0

ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣ ಈಗ ಮತ್ತೊಂದು ಮೈಲಿಗಲ್ಲಿಗೆ ಸಜ್ಜಾಗಿದೆ ಎಂದು ಸಂಸದ ಬಿವೈ ರಾಘವೇಂದ್ರ ಹೇಳಿದ್ದಾರೆ.
ಸ್ಟಾರ್ ಏರ್‌ಲೈನ್ಸ್ ಸಂಸ್ಥೆಯು ನ.21ರಿಂದ ದೇಶದ ಮೂರು ಪ್ರಮುಖ ನಗರಗಳಿಗೆ ಶಿವಮೊಗ್ಗದಿಂದ ವಿಮಾನಯಾನ ಸೇವೆ ಒದಗಿಸುತ್ತಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಇದೇ ನವೆಂಬರ್ 21ರಿಂದ (ಮಂಗಳವಾರದಿಂದ) ಶಿವಮೊಗ್ಗದಿಂದ 3 ಹೊಸ ಮಾರ್ಗಗಳಲ್ಲಿ (ಶಿವಮೊಗ್ಗ-ಗೋವಾ, ಶಿವಮೊಗ್ಗ-ತಿರುಪತಿ, ಶಿವಮೊಗ್ಗ-ಹೈದ್ರಾಬಾದ್) ವಿಮಾನ ಸಂಚಾರ ಆರಂಭಗೊಳ್ಳುತ್ತಿದ್ದು ಜಿಲ್ಲೆಯ ಸಮಸ್ತರೂ ಇದರ ಸದುಪಯೋಗ ಪಡೆಯುವಂತೆ ಈ ಮೂಲಕ ಮನವಿ ಮಾಡುತ್ತಿದ್ದೇನೆ. ಹೊಸ ಮಾರ್ಗಗಳಲ್ಲಿ ಆರಂಭಗೊಳ್ಳುತ್ತಿರುವ ವಿಮಾನಸೇವೆಯಿಂದ ಜಿಲ್ಲೆಯ ಸಂಪರ್ಕ ಕೊಂಡಿ ಇನ್ನಷ್ಟು ವಿಸ್ತರಿಸಲಿದ್ದು, ನೆರೆ ರಾಜ್ಯಗಳ ಸಂಪರ್ಕ ಇನ್ನಷ್ಟು ಸುಲಭವಾಗಲಿದೆ ಎಂದಿದ್ದಾರೆ.

Exit mobile version