Home ತಾಜಾ ಸುದ್ದಿ ನಾಪತ್ತೆಯಾದ ಮೀನುಗಾರರ ಶೋಧ

ನಾಪತ್ತೆಯಾದ ಮೀನುಗಾರರ ಶೋಧ

0

ಪಣಜಿ: ಮೀನುಗಾರಿಕಾ ಬೋಟ್ ಮತ್ತು ಭಾರತೀಯ ನೌಕಾದಳದ ಹಡಗಿನ ಮಧ್ಯೆ ಡಿಕ್ಕಿ ಸಂಭವಿಸಿದ್ದು, ಬೋಟ್‌ನಲ್ಲಿದ್ದ ೧೩ ಮೀನುಗಾರರ ಪೈಕಿ ೧೧ ಮೀನುಗಾರರನ್ನು ರಕ್ಷಿಸಲಾಗಿದೆ. ನಾಪತ್ತೆಯಾದವರಿಗಾಗಿ ನೌಕಾದಳ ಶೋಧ ಕಾರ್ಯ ಕೈಗೊಂಡಿದೆ.
ನವೆಂಬರ್ ೨೧ರಂದು ಸಂಜೆ ಗೋವಾದ ಉತ್ತರ-ಪಶ್ಚಿಮ ಸುಮಾರು ೭೦ ನಾಟಿಕಲ್ ಮೈಲು ದೂರದ ಸಮುದ್ರದಲ್ಲಿ ಈ ಘಟನೆ ನಡೆದಿದೆ. ಮೀನುಗಾರಿಕಾ ಬೋಟ್‌ನಿಂದ ನಾಪತ್ತೆಯಾದ ಇಬ್ಬರು ಮೀನುಗಾರರಿಗಾಗಿ ಭಾರತೀಯ ನೌಕಾದಳದ ಹಡಗು ಮತ್ತು ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ. ಡಿಕ್ಕಿಗೆ ಇದುವರೆಗೂ ನಿಖರ ಕಾರಣ ತಿಳಿದುಬಂದಿಲ್ಲ.

Exit mobile version