ಹುಬ್ಬಳ್ಳಿ: ದಲಿತರು ಯಾಕೆ ಸಿಎಂ ಆಗಬಾರದು. ಮುಖ್ಯಮಂತ್ರಿ ಮಾಡಿದರೆ, ಯಾರು ಬೇಡ ಅಂತಾರೆ. ನಾನು ಏಕೆ ಸಿಎಂ ಆಗಬಾರದು?
ಇದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಮಂಗಳವಾರ ಹುಬ್ಬಳ್ಳಿಯಲ್ಲಿ ಕೇಳಿದ ಪ್ರಶ್ನೆ!
ಮಂಗಳವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನನಗೆ ಸಿಎಂ ಆಗುವ ಶಕ್ತಿ ಇದೆಯೋ ಇಲ್ಲವೋ ಎಲ್ಲ ಶಾಸಕರು ಇದಕ್ಕೆ ಒಪ್ಪುತ್ತಾರೋ ಇಲ್ವೋ ಗೊತ್ತಿಲ್ಲ. ಐದು ವರ್ಷ ಕಾಂಗ್ರೆಸ್ ಸರ್ಕಾರ ಇರುತ್ತದೆ. ಸದ್ಯ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಗಳಾಗಿದ್ದಾರೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದರು.
ದಲಿತರ ಹತ್ಯೆಯಾಗಿವೆ….
ಹಸು ಕೆಚ್ಚಲು ಕೊಯ್ದ ಪ್ರಕರಣದಂತೆ ದಲಿತರ ಹತ್ಯೆಯಾಗಿವೆ. ಇಂತಹ ದುಷ್ಟರನ್ನು ಬಲಿ ಹಾಕಬೇಕು. ಅಂತವರ ಮೇಲೆ ಕ್ರಮಕೈಗೊಳ್ಳುವುದು ಸರಕಾರದ ಕರ್ತವ್ಯ ಅದನ್ನು ನಾವು ಮಾಡುತ್ತೇವೆ. ಬಿಜೆಪಿ ಸಣ್ಣತನ ಬಿಡಬೇಕು ಎಂದರು.
ಜನಪರವಾಗಿ ಸಂವಿಧಾನ ತಿದ್ದುಪಡಿ ಮಾಡಲು ಅವಕಾಶ ಇತ್ತು. ನಾವು ಮತ್ತು ಅವರು ಮಾಡಿದ್ದಾರೆ. ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಸಚಿವರನ್ನಾಗಿ ಮಾಡಿದ್ದೇವೆ. ಆರ್.ಎಸ್.ಎಸ್. ಬಿಜೆಪಿ ಕೇವಲ ಹಿಂದು ಎನ್ನುತ್ತಾರೆ. ಎಷ್ಟೋ ದಲಿತರಿಗೆ ಇನ್ನೂ ಕೆಲವು ಕಡೆ ಪ್ರವೇಶವಿಲ್ಲ. ಅದರ ಬಗ್ಗೆ ಮಾತನಾಡಲ್ಲ ಎಂದರು.