ಬೆಂಗಳೂರು: ನವಗ್ರಹ ಸಿನಿಮಾದಕನ್ನಡದ ಖ್ಯಾತ ಖಳನಟ ದಿನೇಶ್ ಅವರ ಪುತ್ರ, ಗಿರಿ ದಿನೇಶ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಶುಕ್ರವಾರ ಸಂಜೆ ಮನೆಯಲ್ಲಿ ಪೂಜೆ ಮಾಡುವ ವೇಳೆ ಗಿರಿ ದಿನೇಶ್ ಅವರು ಹೃದಯಾಘಾತದಿಂದ ಕುಸಿದು ಬಿದ್ದಿದ್ದರು. ತಕ್ಷಣ ಗಿರಿ ದಿನೇಶ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆಯೇ ನಿಧನರಾಗಿದ್ದಾರೆ. ಅವರ ಅಂತ್ಯಸಂಸ್ಕಾರ ಇಂದು ನೆರವೇರಲಿದೆ. ಕನ್ನಡ ಸಿನಿಮಾದಲ್ಲಿ ಟ್ರೆಂಡ್‌ಸೆಟ್ಟರ್ ಆಗಿದ್ದ ನವಗ್ರಹ ಸಿನಿಮಾದಲ್ಲಿ 9 ಮಂದಿ ಖಳನಟರ ಪುತ್ರರು ನಟಿಸಿದ್ದರು. ಇದರಲ್ಲಿ ಹಿರಿಯ ಖಳನಟ ಹಾಗೂ ಹಾಸ್ಯನಟ ದಿನೇಶ್ ಅವರ ಪುತ್ರ ಗಿರಿ ಕೂಡ ಒಬ್ಬರಾಗಿದ್ದರು. ಆ ಬಳಿಕ ಅವರು ಚಮ್ಕಾಯ್ಸು ಚಿಂದಿ ಉಡಾಯ್ಸು , ವಜ್ರ ಸಿನಿಮಾದಲ್ಲಿಯೂ ನಟಿಸಿದ್ದರು. ಆ ನಂತರ ಅವರು ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. ಆದರೆ ನವಗ್ರಹ ಚಿತ್ರದ ಶೆಟ್ಟಿ ಪಾತ್ರ ಹೆಚ್ಚಿನ ಹೆಸರು ತಂದುಕೊಟ್ಟಿತ್ತು. 2008ರಲ್ಲಿ ಬಿಡುಗಡೆಯಾದ ನವಗ್ರಹ ಸಿನಿಮಾದಲ್ಲಿ ಖ್ಯಾತ ಖಳನಟನಾಗಿ ಮನೆಮಾತಾಗಿದ್ದರು. ಈ ಚಿತ್ರ ಕಳೆದ ವರ್ಷ ನವೆಂಬರ್ 8ರಂದು ಮರುಬಿಡುಗಡೆಯಾಗಿತ್ತು.
