Home ತಾಜಾ ಸುದ್ದಿ ನಯವಾದ ಸುಳ್ಳುಗೆ ಹೆಸರೇ ಬಿಜೆಪಿ

ನಯವಾದ ಸುಳ್ಳುಗೆ ಹೆಸರೇ ಬಿಜೆಪಿ

0

ಬಳ್ಳಾರಿ: ನಯವಾದ ಸುಳ್ಳುಗೆ ಹೆಸರುವಾಸಿಯೇ ಬಿಜೆಪಿ, ಬಿಜೆಪಿ‌ ಮುಖಂಡರು ಅವರ‌ ಮಾತಿಗೆ ಯಾರು ಮರುಳಾಗಬೇಡಿ ಎಂದು ಉಪಮುಖ್ಯಮಂತ್ರಿ ‌ಡಿ.ಕೆ. ಶಿವಕುಮಾರ್ ‌ಹೇಳಿದರು.
ಸಂಡೂರು ಕ್ಷೇತ್ರದ ಪ್ರಚಾರದ ವೇಳೆ ಮಾಧ್ಯಮಗಳ ಜತೆ ಮಾತನಾಡಿದರು. ರಾಜ್ಯದಲ್ಲಿ ನಡೆಯುತ್ತಿರುವ ಮೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮೂರು ಕ್ಷೇತ್ರದಲ್ಲಿ ಗೆಲ್ಲಲಿದ್ದಾರೆ. ಬಿಜೆಪಿಗರು ಹಸಿ‌ ಸುಳ್ಳು ‌ಹೇಳುವುದರಲ್ಲಿ‌‌ ನಿಸ್ಸೀಮರಾಗಿದ್ದಾರೆ.‌ ಸಂಡೂರಿನಲ್ಲಿ ಅನ್ನಪೂರ್ಣ ‌ತುಕಾರಂ ಗೆಲುವು ‌ದಾಖಲಿಸಲಿದ್ದಾರೆ. ಸರಳತೆ, ಅಭಿವೃದ್ಧಿಗೆ ಮತ್ತೊಂದು ಹೆಸರು ತುಕಾರಂ. ಕನಕಪುರದಲ್ಲೂ ತುಕಾರಂ ಮಾಡಿದಷ್ಡು ಕೆಲಸ ‌ನಾನು‌ ಮಾಡಿಲ್ಲ. ಹೀಗಾಗಿ ಅವರಿಗೆ ಮತ್ತೆ ಗೆಲುವಾಗಲಿದೆ. ಬಿಜೆಪಿಯವರಿಗೆ ಅಭಿವೃದ್ಧಿ ‌ಬಗ್ಗೆ ಕನಸಿಲ್ಲ. ಅವರಿಗೆ ಬರೀ ಗುಡ್ಡದ ಮೇಲೆ ಕಣ್ಣು. ಈ ಹಿಂದೆ ಗುಡ್ಡದ ಮೇಲೆ ಕಣ್ಣಿಟ್ಟು ಪರಿಸ್ಥಿತಿ ಏನಾಗಿದೆ ಗೊತ್ತಿದಿಯಲ್ಲ. ಈಗ ಮತ್ತೆ ಅದೇ ಗುಡ್ಡಕ್ಕೆ ಕಣ್ಣು ಹಾಕುತ್ತಿದ್ದಾರೆ ಎಂದರು.
ನಾವು ಸಂಡೂರುನ್ನು ಬೀಜಿಂಗ್ ಮಾಡುವುದಿಲ್ಲ. ಸಂಡೂರು ಸಂಡೂರನ್ನಾಗಿ ಮಾಡುತ್ತೇವೆ. ಬಡ ಜನರ ಉದ್ದಾರ ಮಾಡುತ್ತೇವೆ. ಅವರ ಹಸಿವು ನೀಗಿಸುವ ಕೆಲಸ ಮಾಡುತ್ತೇವೆ ಎಂದ ಡಿಕೆ ಶಿವಕುಮಾರ್ ‌ಜನಾರ್ದನರೆಡ್ಡಿ ಅವರೆಲ್ಲ ಟೆಂಪರವರಿ‌ ಗಿರಾಕಿಗಳು‌ ನಾನು‌‌ ಹೆಚ್ಚಿಗೆ‌ ಮಾತನಾಡಲ್ಲ. ಸಂಡೂರು ಎಲೆಕ್ಷನ್‌ಗೆ ಬಂದಿದಿನಿ‌ ಎಲೆಕ್ಷನ್ ಮಾಡ್ತಿನಿ. ಅಬಕಾರಿ‌ ಇಲಾಖೆಯಲ್ಲಿ ನಡೆದ ಗೋಲ್ಮಾಲ್ ಬಗ್ಗೆ ಗೊತ್ತಿಲ್ಲ. ಯಾವ ಅಧಿಕಾರಿ‌‌ ಆತ್ಮಹತ್ಯೆ ಮಾಡಿಕೊಂಡ‌ ವಿಷಯ‌ ನನಗೆ ಗೊತ್ತಿಲ್ಲ ಎಂದು ಡಿಕೆ ಶಿವಕುಮಾರ್ ‌ಹೇಳಿದರು.
ಸಚಿವರಾದ ‌ಸಂತೋಷ‌ ಲಾಡ್,‌ ಶಾಸಕ ಬಿ.ನಾಗೇಂದ್ರ, ಸಂಸದ ತುಕಾರಂ, ಅನ್ನಪೂರ್ಣ‌‌ ಸೇರಿ‌ ಇತರರು ಇದ್ದರು.

Exit mobile version