ಮಂಗಳೂರು: ರಾಜ್ಯದಲ್ಲಿ ಆರು ಮಂದಿ ನಕ್ಸಲರು ಶರಣಾಗತಿ ಆಗುತ್ತಿದ್ದಾರೆ. ನಕ್ಸಲರು ಹೊಸ ಜೀವನ ಪ್ರಾರಂಭ ಮಾಡಲು ಶರಣಾಗತಿ ಆಗುತ್ತಿರೋದು ಸಂತೋಷದ ವಿಚಾರ ಎಂದು ಸ್ಪೀಕರ್ ಯು ಟಿ ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾರಣಾಗತಿ ಎಲ್ಲಿ ಆಗಬೇಕು ಅನ್ನೋದು ಸರ್ಕಾರ ತೀರ್ಮಾನ ಮಾಡುತ್ತದೆ. ಯಾರಾದರೂ ಸರಿ ಆಗುತ್ತೇನೆ ಅಂತ ಮುಂದೆ ಬಂದ್ರೆ ಅವರನ್ನು ಸರಿದಾರಿಗೆ ತರುವುದು ಸರ್ಕಾರದ ಮಾತ್ರವಲ್ಲ ಸಮಾಜದ ಕರ್ತವ್ಯ ಕೂಡ. ಅವರನ್ನು ದೂರ ಇಡೋದು ಸರಿ ಅಲ್ಲ. ನಾವು ಎಲ್ಲವನ್ನು ಸಕಾರಾತ್ಮಕ ತೆಗೆದುಕೊಳ್ಳಬೇಕು. ದಾರಿ ತಪ್ಪಿದವರು ಮತ್ತೆ ಸರಿದಾರಿಗೆ ಬಂದ್ರೆ ಕಾನೂನಾತ್ಮಕವಾಗಿ ಸರಿ ಮಾಡಬೇಕು. ಹಿಂದೆ ದೇಶ ಮಟ್ಟದಲ್ಲೂ ಶರಣಾಗತಿ ಆಗಿದ್ದಾರೆ ಎಂದರು.