Home ತಾಜಾ ಸುದ್ದಿ ನಕಲಿ ಪೈಪುಗಳ ಮಾರಾಟ: ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು

ನಕಲಿ ಪೈಪುಗಳ ಮಾರಾಟ: ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು

0

ಮುದ್ದೇಬಿಹಾಳ : ಆಶೀರ್ವಾದ ಪೈಪ್ಸ್ ಲಿಮಿಟೆಡ್ ಕಂಪನಿಯ ಹೆಸರಿನ ಪಿವಿಸಿ ಪೈಪುಗಳ ನಕಲಿ ಪೈಪುಗಳನ್ನು ತಂದು ಮಾರಾಟ ಮಾಡಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದ ರಾಜಿಸ್ಥಾನಿ ವ್ಯಾಪಾರಿಯ ಮೇಲೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಓಂ ಸ್ಯಾನಿಟರಿ ಮತ್ತು ವಾಟರ್ ಫಿಟ್ಟಿಂಗ್ ಮಳಿಗೆಯಲ್ಲಿ ನಕಲಿ ಪೈಪುಗಳನ್ನು ತಂದು ಸಾರ್ವಜನಿಕರಿಗೆ ವಂಚಿಸಿದ್ದು ಶನಿವಾರ ಕಂಪನಿಯ ಫಿಲ್ಡ್ ಆಫೀಸರ್ ಬಂದು ಪರಿಶೀಲಿಸಿದಾಗ ಪೈಪುಗಳು ನಕಲಿಯಾಗಿರುವದು ಕಂಡು ಬಂದಿದೆ. ತಮ್ಮ ಕಂಪನಿಯ ನಕಲಿ ಪೈಪುಗಳನ್ನು ತಂದು ಸಾರ್ವಜನಿಕರಿಗೆ ಮಾರಾಟ ಮಾಡಿದ್ದು ಕಾಪಿರೈಟ್ ಕಾಯಿದೆಯ ಪ್ರಕಾರ ಅಪರಾಧವಾಗಿದ್ದು ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಆಧಾರದ ಮೇಲೆ ಇಲ್ಲಿನ ಪಿಎಸ್‌ಐ ಸಂಜೀವ ತಿಪರೆಡ್ಡಿ ಇಬ್ಬರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Exit mobile version