Home ತಾಜಾ ಸುದ್ದಿ ದೊಡ್ಡತಪ್ಲೆ ಬಳಿ ಮತ್ತೆ ಭೂಕುಸಿತ

ದೊಡ್ಡತಪ್ಲೆ ಬಳಿ ಮತ್ತೆ ಭೂಕುಸಿತ

0

ಮಂಗಳೂರು: ಬೆಂಗಳೂರು-ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ೭೫ರ ಶಿರಾಡಿ ಘಾಟಿಯ ಸಕಲೇಶಪುರ ತಾಲೂಕಿನ ದೊಡ್ಡತಪ್ಲೆ ಬಳಿ ಬುಧವಾರ ಸಂಜೆ ಮತ್ತೆ ಭೂಕುಸಿತವಾಗಿದ್ದು, ಒಂದು ಕಂಟೈನರ್ ಲಾರಿ ಸಹಿತ ಹಲವು ವಾಹನಗಳು ಮಣ್ಣಿನಡಿ ಸಿಲುಕಿವೆ.
ಗುಡ್ಡ ಕುಸಿತದ ರಭಸಕ್ಕೆ ಬೃಹತ್ ಕಂಟೈನರ್ ಮಗುಚಿದ್ದು, ಚಾಲಕ ಕಂಟೈನರ್‌ನೊಳಗಿದ್ದಾನೆ. ಸಂಜೆ ವೇಳೆ ಮತ್ತೆ ಮಳೆ ಹೆಚ್ಚಾಗಿರುವುದರಿಂದ ಭೂ ಕುಸಿತವಾಗಿದೆ. ಶಿರಾಡಿ ಘಾಟಿಯಲ್ಲಿ ವಾಹನ ಸಂಚಾರ ನಿಲ್ಲಿಸಲಾಗಿದ್ದು, ನೂರಾರು ವಾಹನಗಳು ನಿಂತಿದೆ.

Exit mobile version