Home News ದೇವಸ್ಥಾನದಲ್ಲಿ ಮೂರ್ತಿ ವಿರೂಪ: ಕ್ರಮಕ್ಕೆ ಆಗ್ರಹ

ದೇವಸ್ಥಾನದಲ್ಲಿ ಮೂರ್ತಿ ವಿರೂಪ: ಕ್ರಮಕ್ಕೆ ಆಗ್ರಹ

ಬಾಗಲಕೋಟೆ(ಇಳಕಲ್): ನಗರದ ಡಾಲರ್ ಕಾಲೋನಿಯಂದು ಕರೆಯಿಸಿಕೊಳ್ಳುವ ಜೋಶಿಗಲ್ಲಿಯ ಬಂಬೂ ಪ್ಯಾಲೇಸ್ ಸಮೀಪದಲ್ಲಿ ಇರುವ ಈಶಾನ್ಯ ಬಸವಣ್ಣ ದೇವಸ್ಥಾನದಲ್ಲಿ ಮೂರ್ತಿಗಳನ್ನು ವಿರೂಪಗೊಳಿಸಿದ ಘಟನೆ ಗುರುವಾರ ನಡೆದಿದೆ.
ಸಾಯಂಕಾಲ ಮಹಿಳೆಯರು ವಾಯುವಿಹಾರಕ್ಕೆ ಹೋದಾಗ ಅಲ್ಲಿನ ಪರಿಸ್ಥಿತಿಯನ್ನು ನೋಡಿ ಮನೆಯವರಿಗೆ ಸುದ್ದಿ ತಿಳಿಸಿದ್ದಾರೆ. ಬಸವರಾಜ ಹುಂಡೇಕಾರ, ಕೂಡ್ಲಪ್ಪ ಕೂಡ್ಲಪ್ಪನವರ ಮತ್ತು ಕೆಲವರು ಸೇರಿ ಅಲ್ಲಿಗೆ ಹೋಗಿ ನೋಡಿದಾಗ ಬಸವಣ್ಣನ ಮೂರ್ತಿಯನ್ನು ಇದ್ದ ಸ್ಥಳದಿಂದ ಎತ್ತಿ ಹೊರಹಾಕಲು ಸಾಧ್ಯವಾಗದೇ ಅಲ್ಲಿಯೇ ಮಗ್ಗಲು ಸರಿಸಿದ್ದಾರೆ ನಾಗಪ್ಪನ ಮೂರ್ತಿಗಳನ್ನು ಹೊರಗೆ ಒಗೆದು ಅವುಗಳನ್ನು ಜಜ್ಜಿ ಹಾಕಿದ್ದಾರೆ. ಕೆಲವು ಗ್ಲಾಸು ಹಾಕಿದ ಫೋಟೋ ಫ್ರೇಮಗಳನ್ನು ಹೊರಗೆ ಒಗೆದು ಒಡೆದು ಹಾಕಲಾಗಿದೆ. ಕೂಡಲೇ ಸ್ಥಳಕ್ಕೆ ಪಿಎಸ್‌ಐ ಷಹಜಹಾನ ನಾಯಕ ಅವರನ್ನು ಕರೆಸಿ ಅಲ್ಲಿನ ಪರಿಸ್ಥಿತಿಯನ್ನು ತೋರಿಸಲಾಗಿದೆ. ಅದನ್ನು ಪರಿಶೀಲನೆ ಮಾಡುತ್ತಿರುವಾಗಲೇ ಹಿಂದೂ ಟ್ರಸ್ಟ್‌ ಮುಖಂಡರಾದ ಪರಶುರಾಮ ಬಿಸಲದಿನ್ನಿ, ಪ್ರದೀಪ ಅಮರಣ್ಣನವರ ಸ್ಥಳಕ್ಕೆ ಬಂದು ಅಲ್ಲಿನ ಪರಿಸ್ಥಿತಿ ಅವಲೋಕಿಸಿ ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಲು ಆಗ್ರಹಿಸಿದ್ದಾರೆ.

Exit mobile version