Home ಅಪರಾಧ ದೇವರಿಗೆ ಬಿಟ್ಟ ಕೋಣ ಅಪಘಾತದಲ್ಲಿ ಸಾವು

ದೇವರಿಗೆ ಬಿಟ್ಟ ಕೋಣ ಅಪಘಾತದಲ್ಲಿ ಸಾವು

0

ಹಾವೇರಿ(ರಾಣೇಬೆನ್ನೂರು): ದೇವರಿಗೆ ಬಿಟ್ಟ ಕೋಣ ರೈಲಿಗೆ ಬಡಿದು ಸಾವನ್ನಪ್ಪಿದ ಘಟನೆ ಶನಿವಾರ ತಾಲೂಕಿನ ವಡೇರಾಯನಹಳ್ಳಿ ಗ್ರಾಮದ ಬಳಿ ನಡೆದಿದೆ.
ತಾಲೂಕಿನ ಮಾಕನೂರ ಗ್ರಾಮದ ಗ್ರಾಮದೇವತೆ ಶ್ರೀ ಮರಡಿಕೆಂಚಮ್ಮ ದೇವಿಗೆ ಈ ಕೋಣವನ್ನು ಬಿಡಲಾಗಿತ್ತು. ವಿಷಯ ತಿಳಿದ ಗ್ರಾಮಸ್ಥರು ಘಟನಾ ಸ್ಥಳಕ್ಕೆ ತೆರಳಿ ಕೋಣನ ಕಳೆಬರವನ್ನು ಗ್ರಾಮದ ಮರಡಿಕೆಂಚಮ್ಮ ದೇವಸ್ಥಾನಕ್ಕೆ ತಂದು ಪೂಜಾ ವಿಧಿ ವಿಧಾನಗಳನ್ನು ಸಲ್ಲಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ದೇವಸ್ಥಾನ ಆವರಣದಲ್ಲಿ ಶವಸಂಸ್ಕಾರ ಮಾಡಿದರು. ಮೆರವಣಗೆಯುದ್ದಕ್ಕೂ ಪ್ರತಿ ಮನೆಯ ಮುಂದೆ ಮಹಿಳೆಯರು ಆರತಿ ಬೆಳಗಿ ಅಂತಿಮ ದರ್ಶನ ಪಡೆದು ನಮಸ್ಕರಿಸುವುದು ಕಂಡು ಬಂತು.

Exit mobile version