Home ತಾಜಾ ಸುದ್ದಿ ದರ್ಶನ್ ಭೇಟಿಗೆ ಬಂದ ವಿಜಯಲಕ್ಷ್ಮೀ

ದರ್ಶನ್ ಭೇಟಿಗೆ ಬಂದ ವಿಜಯಲಕ್ಷ್ಮೀ

0
ಸಾಂದರ್ಭಿಕ ಚಿತ್ರ

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ, ನಟ‌ ದರ್ಶನ್ ಭೇಟಿಗೆ ವಿಜಯಲಕ್ಷ್ಮೀ ‌ಹಾಗೂ ನಟ ಧನ್ವೀರ್, ಸುಶಾಂತ ನಾಯುಡು ಆಗಮಿಸಿದ್ದಾರೆ.
ದರ್ಶನ್‌ಗೆ ತೀವ್ರ ಬೆನ್ನು ‌ನೋವು ಹಿನ್ನೆಲೆಯಲ್ಲಿ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಹೀಗಾಗಿ ಜೈಲಿಗೆ ಆಗಮಿಸಿದ್ದು, ಜೈಲು ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದು,‌ ಕೆಲವೇ‌ ನಿಮಿಷಗಳಲ್ಲಿ ದರ್ಶನ್ ಭೇಟಿ ಮಾಡಲಿದ್ಧಾರೆ. ಭೇಟಿ ವೇಳೆ ಜಾಮೀನು ಮಂಜೂರು, ಬಿಡುಗಡೆಗೆ ಬೇಕಿರುವ ನಿಯಮಾವಳಿ ಪೂರ್ಣದ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಬಿಗಿ ಭದ್ರತೆ: ದರ್ಶನ್‌ಗೆ ಜಾಮೀನು ಮಂಜೂರು ಹಿನ್ನೆಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜೈಲಿನ ಮುಂಭಾಗದಲ್ಲಿ ಜಮಾಯಿಸುತ್ತಿದ್ದರಿಂದ ಜೈಲು ಬಳಿ ಹೆಚ್ಚಿನ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ. ಎರಡು ಕಡೆಯ ರಸ್ತೆಗಳಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿ ಅಭಿಮಾನಿಗಳು ಪ್ರವೇಶ ಮಾಡದಂತೆ ನಿರ್ಬಂಧ ಹೇರಲಾಗಿದೆ.

ಸಂಭ್ರಮ: ದರ್ಶನ್‌ಗೆ ಬೇಲ್ ಸಿಕ್ಕ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದ್ದಾರೆ. ದುರ್ಗಾದೇವಿ ದೇವಸ್ಥಾನದ ಬಳಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದು, ಕೆಲವರು ದುರ್ಗಾದೇವಿ ದೇವಸ್ತಾನದಲ್ಲಿ ಹರಕೆ ತೀರಿಸಿದ್ದಾರೆ.

Exit mobile version