Home ನಮ್ಮ ಜಿಲ್ಲೆ ಚಿಕ್ಕಮಗಳೂರು ದತ್ತಮಾಲೆ ಅಭಿಯಾನಕ್ಕೆ ಚಾಲನೆ

ದತ್ತಮಾಲೆ ಅಭಿಯಾನಕ್ಕೆ ಚಾಲನೆ

0

ಚಿಕ್ಕಮಗಳೂರು: ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದ ಆಶಯದಲ್ಲಿ ಪ್ರತಿವರ್ಷದಂತೆ ನಡೆಯುವ ದತ್ತಮಾಲೆ ಅಂಗವಾಗಿ ಇಂದು ನೂರಾರು ದತ್ತಭಕ್ತರು ದತ್ತಮಾಲಾಧಾರಣೆ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ನಗರದ ಕಾಮಧೇನು ಗಣಪತಿ ದೇವಾಲಯ ಆವರಣದಲ್ಲಿ ಭಾನುವಾರ ನೂರಾರು ದತ್ತಭಕ್ತರು ಮಾಲಾಧಾರಣೆ ಮಾಡಿದರು. ಮಾಜಿ ಶಾಸಕ ಸಿ.ಟಿ.ರವಿ, ಭಜರಂಗದಳ ಮುಖಂಡ ರಘು ಸಕಲೇಶಪುರ ಸೇರಿದಂತೆ ಪ್ರಮುಖರು ಮಾಲೆ ಧರಿಸಿದರು.
ಜಿಲ್ಲೆಯ ಹಲವೆಡೆಯಿಂದ ಆಗಮಿಸಿದ ದತ್ತಭಕ್ತರು ದತ್ತಾತ್ರೇಯ ಸ್ತೋತ್ರ ಹೇಳುತ್ತಾ ಭಜನೆ ಮಾಡುತ್ತಾ ಕೇಸರಿ ಶಾಲು ಧರಿಸಿ ಇಂದಿನಿಂದ ವೃತ ಆರಂಭಿಸಿದರು.
ಡಿಸೆಂಬರ್ 26ರ ದತ್ತಜಯಂತಿ ಕೊನೆ ದಿನದವರೆಗೂ ಮಾಲೆ ಧರಿಸಿ ನಿತ್ಯ ಪೂಜೆ , ಭಜನೆ ಕೈಗೊಳ್ಳಲಿದ್ದಾರೆ. ಕಾಮಧೇನು ಗಣಪತಿ ದೇಗುಲ ಆವರಣದಲ್ಲಿ ಇದಕ್ಕೂ ಮೊದಲು ದತ್ತಾತ್ರೇಯರ ವಿಗ್ರಹ ಇಟ್ಟು ಪೂಜೆ ಸಲ್ಲಿಸಲಾಯಿತು.

Exit mobile version