Home ನಮ್ಮ ಜಿಲ್ಲೆ ಚಿಕ್ಕಮಗಳೂರು ತನಿಖೆಯಿಂದ ಹಿಂದಿನ ಶಕ್ತಿ, ಷಡ್ಯಂತ್ರಗಳು ಹೊರಬರಲಿದೆ

ತನಿಖೆಯಿಂದ ಹಿಂದಿನ ಶಕ್ತಿ, ಷಡ್ಯಂತ್ರಗಳು ಹೊರಬರಲಿದೆ

0

ಚಿಕ್ಕಮಗಳೂರು: ಮೊನ್ನೆ ಸಂಸತ್ತಿನಲ್ಲಿ ನಡೆದ ಭದ್ರತಾ ಲೋಪದ ಬಗ್ಗೆ ತನಿಖೆ ಆಗುತ್ತಿದೆ. ಆದಷ್ಟು ಬೇಗ ಇದರ ಹಿಂದಿನ ಶಕ್ತಿ, ಷಡ್ಯಂತ್ರಗಳು ಹೊರಬರಲಿದೆ. ಅಪರಾಧಿಗಳಿಗೆ ಶಿಕ್ಷೆ ಆಗಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಪ್ರಕರಣದ ಕುರಿತು ಸ್ಪೀಕರ್ ಅವರ ನೇತೃತ್ವದಲ್ಲಿ ತನಿಖೆ ಆಗುತ್ತಿದೆ. ಸಂಸತ್ತಿಗೆ ಸ್ಪೀಕರ್ ಮತ್ತು ರಾಜ್ಯ ಸಭೆ ಅಧ್ಯಕ್ಷರು ವಾರಸುದಾರರು ಅತ್ಯಂತ ಗಂಭೀರ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ ಎಂದರು.
ರಾಷ್ಟ್ರೀಯ ತನಿಖಾದಳದ ಹಲವಾರು ಏಜೆನ್ಸಿಗಳು ಮತ್ತು ಸಂಸತ್ತಿನ ಒಳಗಿನ ಭದ್ರತಾ ವ್ಯವಸ್ಥೆಯು ತನಿಖೆ ನಡೆಸುತ್ತಿದೆ. ಇಂದು ಮತ್ತು ನಾಳೆ ಸಂಸತ್ತಿಗೆ ರಜೆ ಇದೆ. ಲಲಿತ್ ಝಾ ಎಂಬಾತ ಎಲ್ಲರ ಮೊಬೈಲ್ ಸಂಗ್ರಹಿಸಿಕೊಂಡು ಪರಾರಿಯಾಗಿದ್ದ ಅವನನ್ನೂ ಬಂಧಿಸಲಾಗಿದೆ ಎಂದು ಹೇಳಿದರು.

Exit mobile version