Home ತಾಜಾ ಸುದ್ದಿ ಡೇಂಜರ್, ಪಿಕ್ ಪಾಕೆಟ್ ಬಿಜೆಪಿ ಸಂಸ್ಕೃತಿ

ಡೇಂಜರ್, ಪಿಕ್ ಪಾಕೆಟ್ ಬಿಜೆಪಿ ಸಂಸ್ಕೃತಿ

0

ರಬಕವಿ-ಬನಹಟ್ಟಿ: ರಾಜ್ಯದಲ್ಲಿ ಡೇಂಜರ್ ಎಲ್ಲಿದೆ? ಪಿಕ್ ಪಾಕೆಟ್ ಮಾಡುವ ಸಂಸ್ಕೃತಿ ಬಿಜೆಪಿಯದ್ದು, ತಮ್ಮ ಅನುಭವವನ್ನೇ ಜಾಹೀರಾತಿನ ಮೂಲಕ ಹಂಚಿಕೊಂಡಿದ್ದಾರೆಂದು ಸಚಿವ ಆರ್.ಬಿ. ತಿಮ್ಮಾಪೂರ ಬಿಜೆಪಿ ವಿರುದ್ಧ ಹರಿಹಾಯ್ದರು.
ಬನಹಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಮಾಂಸಕ್ಕೆ ವಿರೋಧಿಸುತ್ತಿರುವ ಬಿಜೆಪಿಗರು ತಾಕತ್ತಿದ್ದರೆ ಕಸಾಯಿಖಾನೆ ಬಂದ್ ಮಾಡಿಸಲಿ, ಇಡೀ ಜಗತ್ತಿನಲ್ಲಿಯೇ ಗೋಮಾಂಸದಲ್ಲಿ ೨ನೇ ಸ್ಥಾನವಿದೆ. ಇದೇ ದೇಶಭಕ್ತಿ, ಧರ್ಮ, ಸಂಸ್ಕೃತಿಯ ಸಂಕೇತವೇ? ಎಂದು ಪ್ರಶ್ನಿಸಿದರು.
ಬಿಜೆಪಿ ನಾಯಕರುಗಳೇ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳನ್ನು ಮದುವೆಯಾಗಿದ್ದಾರೆ. ಇದಕ್ಕೆ ಲವ್ ಜಿಹಾದ್ ಅಲ್ಲವೇ?. ವಿನಾಕಾರಣ ಚುನಾವಣೆ ಸಂದರ್ಭ ಲವ್ ಜಿಹಾದ್, ಕೋಮುದ್ವೇಷಗಳಂತಹ ಕಪಟತನವನ್ನು ಎಳೆದು ತರುವಲ್ಲಿ ಬಿಜೆಪಿಗರು ನಿಸ್ಸೀಮರೆಂದು ತಿಮ್ಮಾಪೂರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

Exit mobile version