Home ನಮ್ಮ ಜಿಲ್ಲೆ ಚಿತ್ರದುರ್ಗ ಜೈಲಿನಿಂದ ಮುರುಘಾ ಶ್ರೀ ಬಿಡುಗಡೆ

ಜೈಲಿನಿಂದ ಮುರುಘಾ ಶ್ರೀ ಬಿಡುಗಡೆ

0

ಚಿತ್ರದುರ್ಗ: ಪೋಕ್ಸೋ ಕಾಯ್ದೆ ಅಡಿ ಕಳೆದ ಹದಿಮೂರು ತಿಂಗಳು ಹದಿನೈದು ದಿನಗಳಿಂದ ಕಾರಾಗೃಹದಲ್ಲಿ ಬಂಧಿಯಾಗಿದ್ದ. ಮುರುಘಾಶರಣರ ಗುರುವಾರ ಷರತ್ತು ಬದ್ದ ಜಾಮೀನು‌ಮೇಲೆ ಬಿಡುಗಡೆಯಾಗಿದ್ದಾರೆ. ಇದರಿಂದಾಗಿ ಶರಣರು ಸದ್ಯಕ್ಕೆ ನಿರಾಳರಾಗಿದ್ದು ೨ನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಡಿ ವಾರೆಂಟ್ ನಿಂದ ನ್ಯಾಯಾಂಗ ಬಂಧನ ವಿಸ್ತರಿಸುವ‌ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
12.40 ರ ಸುಮಾರಿಗೆ ಶರಣರು‌ಜೈಲಿನಿಂದ ಬಿಡುಗಡೆಯಾದರು. ಸ್ನೇಹಿತರು ಬೆಂಬಲಿಗರು ಶರಣರನ್ಮು ಕಾರಿನಲ್ಲಿ ದಾವಣಗೆರೆಗೆ‌ಕರೆದು ಕೊಂಡು ಹೋದರು. ವಿರಕ್ತಮಠ ಅಥವಾ ಸ್ನೇಹಿತ‌ಜಯಕುಮಾರ್‌ನಿವಾಸದಲ್ಲಿ ತಂಗುವ‌ ಸಾಧ್ಯತೆ ‌ಇದೆ.
ಆಗಸ್ಟ್ 26. ,2022 ರಂದು ಅಪ್ರಾಪ್ತ ಬಾಲಕಿಯರು ದೂರು‌ನೀಡಿದ್ದರು. ಚಿತ್ರದುರ್ಗ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ‌ಶರಣರ ಪರ. ವಕೀಲರು ಸಲ್ಲಿಸಿದ್ದ ‌ಜಾಮೀನು‌ ಅರ್ಜಿ ತಿರಸ್ಕರಿಸಿತ್ತು. ನಂತರ ಹೈಕೋರ್ಟ್ ನವೆಂಬರ್‌ ಎಂಟರಂದು‌‌‌ ಷರತ್ತು ಬದ್ದ ಜಾಮೀನು‌ ನೀಡಿತ್ತು.

Exit mobile version