Home ಅಪರಾಧ ಜೇನು ದಾಳಿ: ವ್ಯಕ್ತಿ ಸಾವು

ಜೇನು ದಾಳಿ: ವ್ಯಕ್ತಿ ಸಾವು

0

ಶಿವಮೊಗ್ಗ: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಣಗೆರೆಕಟ್ಟೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಟಿಪ್ಪು ನಗರದ ವ್ಯಾಪಾರಿಯೊಬ್ಬರಿಗೆ ಜೇನುಗಳು ಕಚ್ಚಿದ ಪರಿಣಾಮ ಅವರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ಟಿಪ್ಪುನಗರದ ನಿವಾಸಿ ೫೦ ವರ್ಷದ ಹಬೀಬ್ ಎಂಬುವರು, ನಜ್ರುಲ್ಲಾ, ಸರ್ದಾರ್ ಎಂಬುವರ ಜೊತೆಗೆ ಹಣಗೆರೆಕಟ್ಟೆಯಲ್ಲಿ ಬಟ್ಟೆ ವ್ಯಾಪಾರ ಮಾಡಲೆಂದು ತೆರಳುತ್ತಿದ್ದರು. ಸಿರಿಗೆರೆ ಬಳಿ ಹೋಗುತ್ತಿದ್ದಾಗ, ಇವರ ಮೇಲೆ ಜೇನು ನೊಣಗಳು ದಾಳಿ ನಡೆಸಿವೆ. ಜೇನು ದಾಳಿಯಲ್ಲಿ ಮೂವರಿಗೂ ಗಂಭೀರವಾದ ಗಾಯಗಳಾಗಿವೆ. ತಕ್ಷಣವೇ ಅವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಆಯನೂರು ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದ್ದರು.
ಈ ನಡುವೆ ಚಿಕಿತ್ಸೆ ಫಲಕಾರಿಯಾಗದೆ ಹಬೀಬ್ ಮೃತಪಟ್ಟಿದ್ದಾರೆ. ಈ ಸಂಬಂಧ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version