ಲೋಕಾಯುಕ್ತ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ
ರಾಯಚೂರು: ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು, ರಾಯಚೂರು ತಾಲ್ಲೂಕಿನ ಗಿಲ್ಲೆಸುಗೂರು ಜೆಸ್ಕಾಂ ಉಪ ವಿಭಾಗದ ಜೆ.ಇ ಹುಲಿರಾಜ್ ನಿವಾಸದ ಮನೆ ಮೇಲೆ ದಾಳಿ ನಡೆಸಿದ್ದು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ನಗರದ ಮಡ್ಡಿಪೇಟೆ ಹಾಗೂ ಐಡಿಎಸ್ಎಂಟಿ ಬಡಾವಣೆಗಳ ನಿವಾಸದ ಮೇಲೂ ಬುಧವಾರ ಬೆಳಿಗ್ಗೆ ದಾಳಿ ಮಾಡಿ ಶೋಧ ಕಾರ್ಯ ನಡೆಸುತ್ತಿದ್ದಾರೆ.