Home News ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ ಸಂದೇಶ: ಭಯಗೊಂಡ ಸಿಬ್ಬಂದಿ

ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ ಸಂದೇಶ: ಭಯಗೊಂಡ ಸಿಬ್ಬಂದಿ

ರಾಯಚೂರು: ನಗರದ ಹೊರವಲಯದ ಯಕ್ಲಾಸಪೂರು‌ ರಸ್ತೆಯಲ್ಲಿರುವ ‌ನೂತನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಾಂಬ್ ಇದೆ ಎಂದು ಜಿಲ್ಲಾಧಿಕಾರಿ ಕಚೇರಿಗೆ ಇ-ಮೇಲ್ ಬಂದಿದ್ದು ಸಿಬ್ಬಂದಿ ಭಯಭೀತರಾಗಿ ಕಚೇರಿಯಿಂದ ಹೊರಗೆ ಬಂದಿದ್ದಾರೆ. ಇ-ಮೇಲ್ ಸಂದೇಶ ಬಂದಿದ್ದು ಮಾಹಿತಿ ತಿಳಿಯುತ್ತಿದ್ದಂತೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಕಚೇರಿಯಿಂದ ಓಡಿ ಹೊರಬಂದರು. ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಈ ಬಗ್ಗೆ ಎಸ್‌ಪಿ ಎಂ.ಪುಟ್ಟಮಾದಯ್ಯ ಅವರು ಇ-ಮೇಲ್ ಬಂದಿರುವುದು ಖಚಿತಪಡಿಸಿದ್ದಾರೆ. ಬೆಳಗ್ಗೆ 9.30ರ ಸುಮಾರಿಗೆ ಡಿಸಿ ಆಫೀಸ್ ರಾಯಚೂರು ಮೇಲ್‌ಗೆ ಸಂದೇಶ ಬಂದಿದೆ. ಮಧ್ಯಾಹ್ನ 12.30ಕ್ಕೆ ಬಾಂಬ್ ನಿಷ್ಟ್ರಿಯ ದಳ ಹಾಗೂ ಶ್ವಾನ ದಳ ಸಿಬ್ಬಂದಿ ಡಿಸಿ ಕಚೇರಿಯಲ್ಲಿ ತಪಾಸಣೆ ಕೈಗೊಂಡಿದ್ದಾರೆ. ಬೇಸಿಗೆ ಇರುವ ಕಾರಣಕ್ಕೆ ಕಚೇರಿ ಸಮಯ ಮಧ್ಯಾಹ್ನದವರೆಗೂ ಇತ್ತು. ಹೀಗಾಗಿ ಕಚೇರಿ ಸಿಬ್ಬಂದಿ ಬೇಗನೆ ತೆರಳಿದ್ದಾರೆ. ಬೆದರಿಕೆ ಮೇಲ್ ಎಲ್ಲಿಂದ ಬಂದಿದೆ ಎಂಬ ಮಾಹಿತಿ ಕಲೆ ಪೊಲೀಸರು ಸಂಗ್ರಹಿಸುತ್ತಿದ್ದಾರೆ.

Exit mobile version