Home ಕ್ರೀಡೆ ಜಾವೆಲಿನ್: ಫೈನಲ್ ಪ್ರವೇಶಿಸಿದ ಚಿನ್ನದ ಹುಡುಗ ನೀರಜ್

ಜಾವೆಲಿನ್: ಫೈನಲ್ ಪ್ರವೇಶಿಸಿದ ಚಿನ್ನದ ಹುಡುಗ ನೀರಜ್

0

ಪ್ಯಾರಿಸ್: ಭಾರತದ ಚಿನ್ನ ಹುಡುಗ ನೀರಜ್ ಚೋಪ್ರಾ ಮೊದಲ ಪ್ರಯತ್ನದಲ್ಲೇ ಪುರುಷರ ಜಾವೆಲಿನ್‌ನಲ್ಲಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. ೮೯.೩೪ ಮೀಟರ್ ದೂರ ಎಸೆಯುವ ಮೂಲಕ ಬಂಗಾರದ ಭರವಸೆ ಮೂಡಿಸಿದ್ದಾರೆ.
ಆಗಸ್ಟ್ ೮ರಂದು ರಾತ್ರಿ ೧೧ರ ಸುಮಾರಿಗೆ ನಡೆಯುವ ಫೈನಲ್‌ನಲ್ಲಿ ಚಿನ್ನದ ಪದಕಕ್ಕಾಗಿ ನೀರಜ್ ಹೋರಾಟ ನಡೆಸಲಿದ್ದಾರೆ. ಆದರೆ ಮತ್ತೊಬ್ಬ ಭಾರತೀಯ ಕಿಶೋರ್ ಜೆನಾ ನಿರಾಸೆ ಮೂಡಿಸಿದ್ದು, ಅರ್ಹತೆ ಪಡೆಯಲು ವಿಫಲರಾಗಿದ್ದಾರೆ. ಫೈನಲ್‌ಗೆ ಅರ್ಹತೆ ಪಡೆಯಲು ೮೫ ಮೀ. ಎಸೆಯಬೇಕಿತ್ತು. ಆದರೆ ಕಿಶೋರ್ ೮೦.೭೩ ಮೀ. ಎಸೆಯಲಷ್ಟೇ ಶಕ್ತರಾದರು. ತನ್ನ ಮೂರು ಪ್ರಯತ್ನಗಳಲ್ಲೂ ೮೫ ಮೀ. ದಾಟಲು ಸಾಧ್ಯವಾಗಲಿಲ್ಲ.
ನೀರಜ್ ಚೋಪ್ರಾ ಎಸೆದ ಮೊದಲ ಪ್ರಯತ್ನದಲ್ಲೇ ೮೫ ಮೀ. ಗಡಿ ದಾಟಿದರು. ಅರ್ಹತಾ ಸುತ್ತಿನ ಇತಿಹಾಸದಲ್ಲೇ ಅತಿ ದೂರ ಜಾವೆಲಿನ್ ಎಸೆಯುವ ಮೂಲಕ ದಾಖಲೆ ಕೂಡ ಬರೆದಿದ್ದಾರೆ. ಪಾಕಿಸ್ತಾನದ ಅರ್ಷದ್ ನದೀಮ್ ೮೬.೫೯ ಮೀಟರ್ ಎಸೆದು ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Exit mobile version