Home ಅಪರಾಧ ಗದಗ ಹತ್ಯೆ ಪ್ರಕರಣದ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ: ಕಾಲಿಗೆ ಗುಂಡು

ಗದಗ ಹತ್ಯೆ ಪ್ರಕರಣದ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ: ಕಾಲಿಗೆ ಗುಂಡು

0

ಗದಗ: ಒಂದೇ ಕುಟುಂಬದ ನಾಲ್ವರು ಬರ್ಬರ ಹತ್ಯೆ ಪ್ರಕರಣದ 2ನೇ ಆರೋಪಿ ಫೈರೋಜ್ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದು ಆತನ ಕಾಲಿಗೆ ಗುಂಡೇಟು ನೀಡಿದ ಘಟನೆ ಗದಗ-ನರಗುಂದ ರಸ್ತೆಯಲ್ಲಿ ನಡೆದಿದೆ.
ಸ್ಥಳ ಮಹಜರು ವೇಳೆ ಗದಗ ಗ್ರಾಮಾಂತರ ಪಿಎಸ್​ಐ ಶಿವಾನಂದ ಪಾಟೀಲ್ ಮೇಲೆಯೇ ಬಿಯರ್​ ಬಾಟಲ್​ನಿಂದ ಹಲ್ಲೆ ಮಾಡಿ ಪರಾರಿಗೆ ಯತ್ನಿಸಿದ ಹಿನ್ನೆಲೆ ಪ್ರಾಣ ರಕ್ಷಣೆಗಾಗಿ ಪಿಐ ಧೀರಜ್ ಶಿಂಧೆ ಫೈರೋಜ್ ಕಾಲಿಗೆ ಗುಂಡು ಹಾರಿಸಿದ್ದಾರೆ.
ಗಾಯಗೊಂಡ ಫೈರೋಜ್‌ನನ್ನು ನರಗುಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಲಾಗಿದೆ.

Exit mobile version